ಬೆಂಗಳೂರಿನಲ್ಲಿ ಹೊಸವರ್ಷದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಪ್ರಮುಖ ಸಾರಿಗೆಯಾದ ನಮ್ಮ ಮೆಟ್ರೊ ಹೊಸ ವರ್ಷಕ್ಕಾಗಿ ಡಿಸೆಂಬರ್ 31ರಂದು ಮೆಟ್ರೊ ಸಂಚಾರದ ಸಮಯವನ್ನು ವಿಸ್ತರಿಸಿದೆ.

ಹೊಸ ವರ್ಷದ ಅಂಗವಾಗಿ ಜನದಟ್ಟಣೆಯನ್ನು ನಿಯಂತ್ರಣ ಮಾಡಲು ನಮ್ಮ ಮೆಟ್ರೊ ಹಲವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಇದರ ನಡುವೆ ರೈಲು ಸಂಚಾರದ ಸಮಯವನ್ನು ಹೆಚ್ಚಿಸಿದೆ. ಪ್ರಮುಖ ಮಾರ್ಗಗಳಾದ ಹಸಿರು, ನೇರಳೆ ಹಾಗೂ ಹಳದಿ ಮಾರ್ಗದಲ್ಲಿ ಇಂದು (ಡಿಸೆಂಬರ್ 31)ರ ತಡರಾತ್ರಿಯವರೆಗೂ ಮೆಟ್ರೊ ಸಂಚಾರ ಇರಲಿದೆ.
.ಗಮನಿಸಿ: ಹೊಸ ವರ್ಷದಂದು ಈ ಮೆಟ್ರೊ ನಿಲ್ದಾಣ, ಫ್ಲೈ ಓವರ್ಗಳಲ್ಲಿ ಪ್ರವೇಶ ಇರಲ್ಲ.New Year 2026: ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಇದು.
ಹಸಿರು ಮಾರ್ಗ : ಮಾದಾವರ ಹಾಗೂ ರೇಷ್ಮೆ ಸಂಸ್ಥೆ ನಡುವಿನ ಮಾರ್ಗದಲ್ಲಿ ರಾತ್ರಿ 2 ಗಂಟೆಯ ವರೆಗೆ ಮೆಟ್ರೊ ಸಂಚಾರ ಇರಲಿದೆ.

ನೇರಳೆ ಮಾರ್ಗ: ವೈಟ್ ಫೀಲ್ಡ್ನಿಂದ ಚಲ್ಲಘಟ್ಟ ಕಡೆಗೆ ರಾತ್ರಿ 1:45ರವರೆಗೆ, ಚಲ್ಲಘಟ್ಟದಿಂದ ವೈಟ್ ಫೀಲ್ದ್ ಕಡೆಗೆ ರಾತ್ರಿ 2 ಗಂಟೆಯವರೆಗೆ ಮೆಟ್ರೊ ಸಂಚಾರವಿರುತ್ತದೆ.

ಹಳದಿ ಮಾರ್ಗ: ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಕಡೆಗೆ ರಾತ್ರಿ 3:10ರವರೆಗೆ, ಬೊಮ್ಮಸಂದ್ರದಿಂದ ಆರ್.ವಿ ರಸ್ತೆಯ ಕಡೆಗೆ 1:30ರವರೆಗೂ ಮೆಟ್ರೊ ಸಂಚಾರವಿರುತ್ತದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ದಿಂದ 2:45ಕ್ಕೆ ಹಸಿರು ಹಾಗೂ ನೇರಳೆ ಮಾರ್ಗಕ್ಕೆ ಕೊನೆಯ ಮೆಟ್ರೊ ರೈಲಿನ ಸಂಚಾರವಿರುತ್ತದೆ.

ರೈಲು ಸಂಚಾರದ ಸಮಯ ರಾತ್ರಿ 11:30ರ ನಂತರ ಹೀಗಿರಲಿದೆ:

ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪ್ರತೀ 8 ನಿಮಿಷಕ್ಕೊಮ್ಮೆ ಮೆಟ್ರೊ ಸಂಚಾರವಿರುತ್ತದೆ.

ಹಳದಿ ಮಾರ್ಗದಲ್ಲಿ ಪ್ರತೀ 15 ನಿಮಿಷಕ್ಕೊಂದು ಮೆಟ್ರೊ ಇರಲಿದೆ.

ಈ ನಡುವೆ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದಾಗಿ ನೇರಳೆ ಮಾರ್ಗದಲ್ಲಿರುವ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ನಿಲ್ದಾಣವನ್ನು ರಾತ್ರಿ 10 ಗಂಟೆಯ ನಂತರ ತಾತ್ಕಾಲಿಕವಾಗಿ ಬಂದ್ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಬದಲಿಯಾಗಿ ಕಬ್ಬನ್ ಪಾರ್ಕ್ ಹಾಗೂ ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.