ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

News Express: ಕಿರಾಣಿ ಅಂಗಡಿಗೆ ತೆರಳಿ ಪತ್ನಿಗೆ ಐಸ್‌ಕ್ರೀಂ ಕೊಡಿಸಿದ ನಟ ಯಶ್

News Express
Published 17 ಫೆಬ್ರುವರಿ 2024, 14:28 IST
Last Updated 17 ಫೆಬ್ರುವರಿ 2024, 14:28 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಚಿತ್ರನಟ ಯಶ್ ಚಿತ್ರಾಪುರದಲ್ಲಿರುವ ಸಣ್ಣ ಕಿರಾಣಿ ಅಂಗಡಿಯಿಂದ ಮಗಳಿಗೆ ಚಾಕಲೊಟ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಐಸಕ್ರೀಮ್ ಕ್ಯಾಂಡಿ ಕೊಡಿಸಿದ್ದಾರೆ. ದಂಪತಿಯು ಅಂಗಡಿಯ ಎದುರು ನಿಂತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಸಿನಿಮಾ ಚಿತ್ರೀಕರಣದ ಒತ್ತಡದ ನಡುವೆಯೂ ವರ್ಷಕ್ಕೆ ಒಮ್ಮೆ ಚಿತ್ರಾಪುರ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿಯೂ ಮಠಕ್ಕೆ ಭೇಟಿ ನೀಡಿದ್ದ ಅವರು ಒಂದು ದಿನ ಅಲ್ಲಿಯೇ ತಂಗಿದ್ದರು. ಶುಕ್ರವಾರ ಮಠದಿಂದ ತೆರಳಿದ್ದಾರೆ.ಕಿರಾಣಿ ಅಂಗಡಿಯ ಕಟ್ಟೆಯ ಮೇಲೆ ಸ್ಟಾರ್ ನಟಿ ರಾಧಿಕಾ ಕುಳಿತು ಐಸಕ್ರೀಮ್ ಸವಿಯುತ್ತಿದ್ದರೆ, ಯಶ್ ಅಂಗಡಿಯಲ್ಲಿ ವ್ಯವಹರಿಸುತ್ತಿರುವ ಚಿತ್ರವು ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಸ್ಟಾರ್ ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT