ಸಚಿವರ ಕಚೇರಿಗೆ ಕಂಪ್ಯೂಟರ್, ಟಿವಿ, ಫ್ರಿಜ್
ಅರಣ್ಯ ಸಚಿವರ ಆಪ್ತ ಶಾಖೆಯ ಕಚೇರಿಯ ನಿತ್ಯ ಬಳಕೆಗೆ ಕಂಪ್ಯೂಟರ್, ಟ್ಯಾಬ್, ಪ್ರಿಂಟರ್, ಟಿವಿ, ಯುಪಿಎಸ್, ಫ್ರಿಜ್ ಸೇರಿದಂತೆ 19 ವಿಧದ ಎಲೆಕ್ಟ್ರಾನಿಕ್ ಉಪಕರಣ– ಸಾಧನಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಹಣದಿಂದ ಪೂರೈಸಲಾಗಿದೆ. ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವರ ಟಿಪ್ಪಣಿ ಮೇರೆಗೆ ಮಂಡಳಿ ಸದಸ್ಯ ಕಾರ್ಯದರ್ಶಿ ಅವರು ಸುಮಾರು ₹72 ಲಕ್ಷ ಮೌಲ್ಯದ ಉಪಕರಣಗಳನ್ನು ಪೂರೈಸಲು ಅನುಮೋದನೆ ನೀಡಿದ್ದಾರೆ.