ಬೆಂಗಳೂರು: ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ (ಜೂಜಾಟ) ಮತ್ತು ಗೇಮಿಂಗ್ಗಳಿಗೆ ಅಂಕುಶ ಹಾಕಲು ಸರ್ಕಾರ ನಿರ್ಧರಿಸಿದೆ.

ಈ ಉದ್ದೇಶದಿಂದ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ– 2025’ರ ಕರಡು ಸಿದ್ಧಗೊಂಡಿದೆ. ವಿಧಾನಮಂಡಲದ ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ.

‘ಕರ್ನಾಟಕ ಪೊಲೀಸ್ ಕಾಯ್ದೆ –1963’ಕ್ಕೆ ತಿದ್ದುಪಡಿ ಮಾಡುವ ಮೂಲಕ ಆನ್ಲೈನ್ ಬೆಟ್ಟಿಂಗ್ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಹೇರಲು ಈ ಮಸೂದೆಯನ್ನು ಸರ್ಕಾರ ರೂಪಿಸಿದೆ. ಜೊತೆಗೆ, ರಾಜ್ಯ ಸರ್ಕಾರ ‘ಕರ್ನಾಟಕ ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ’ ರಚಿಸಲು ಕೂಡಾ ಈ ಮಸೂದೆ ಅವಕಾಶ ಕಲ್ಪಿಸಲಿದೆ. ಈ ಪ್ರಾಧಿಕಾರದಿಂದ ಪರವಾನಗಿ ಪಡೆದು ನಡೆಸುವ ‘ಕೌಶಲ ಆಟ’ಗಳಿಗೆ ನಿಷೇಧದಿಂದ ವಿನಾಯಿತಿ ಸಿಗಲಿದೆ.

ಆನ್ಲೈನ್ ಬೆಟ್ಟಿಂಗ್ನಲ್ಲಿ ತೊಡಗಿರುವ ಮತ್ತು ಪ್ರಾಧಿಕಾರದಿಂದ ಪರವಾನಗಿ ಪಡೆಯದೆ ‘ಕೌಶಲ ಆಟ’ಗಳ ಆನ್ಲೈನ್ ವೇದಿಕೆ ನಡೆಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯವರಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಜಾಹೀರಾತು ಅಥವಾ ಪ್ರಚಾರದ ಮೂಲಕ ಆನ್ಲೈನ್ ಬೆಟ್ಟಿಂಗ್ಗೆ ಕುಮ್ಮಕ್ಕು, ಪ್ರೋತ್ಸಾಹ ನೀಡುವವರಿಗೆ, ಸಹಾಯ ಮಾಡುವವರಿಗೆ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹10 ಸಾವಿರವರೆಗೆ ವಿಸ್ತರಿಸಬಹುದಾದ ದಂಡ ವಿಧಿಸುವ ಪ್ರಸ್ತಾವವೂ ಕರಡು ಮಸೂದೆಯಲ್ಲಿದೆ.

ಕರಡು ಮಸೂದೆಯಲ್ಲಿ ಏನಿದೆ?: ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ, ನಗದು, ಟೋಕನ್ಗಳು, ವರ್ಚುವಲ್ ಕರೆನ್ಸಿ ಅಥವಾ ಡಿಜಿಟಲ್ ಸ್ವರೂಪದ ಹಣ ಬಳಕೆಯ ‘ಅದೃಷ್ಟ ಆಟ’ಗಳನ್ನು ಒಳಗೊಂಡ ಎಲ್ಲ ರೀತಿಯ ಆನ್ಲೈನ್ ಬೆಟ್ಟಿಂಗ್ ಅಥವಾ ಜೂಜಾಟವನ್ನು ನಿಷೇಧಿಸುವ ಪ್ರಸ್ತಾವವಿದೆ. ರಾಜ್ಯ ಸರ್ಕಾರ ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ನಿರ್ಧರಿಸಿದಂತೆ ಪರವಾನಗಿ ಪಡೆಯುವ ಮತ್ತು ಅಂತಹ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವ ಷರತ್ತಿನ ‘ಕೌಶಲ ಆಟ’ಗಳು ಈ ನಿಷೇಧದಿಂದ ವಿನಾಯಿತಿ ಪಡೆಯಲಿವೆ.

ಇಂಟರ್ನೆಟ್, ಮೊಬೈಲ್ ಆ್ಯಪ್ಗಳು ಅಥವಾ ಇತರ ಡಿಜಿಟಲ್ ವೇದಿಕೆಗಳ ಮೂಲಕ ನಡೆಸುವ ಆಟ, ಕಾರ್ಯಕ್ರಮ ಅಥವಾ ಚಟುವಟಿಕೆಯ ಫಲಿತಾಂಶದ ಮೇಲೆ ಹಣ, ಟೋಕನ್ಗಳು, ವರ್ಚುವಲ್ ಕರೆನ್ಸಿ ಅಥವಾ ಡಿಜಿಟಲ್ ಸ್ವರೂಪದ ಹಣವನ್ನು ಪಣಕ್ಕಿಟ್ಟು ಆಡುವುದು ‘ಆನ್ಲೈನ್ ಬೆಟ್ಟಿಂಗ್’ ಆಗಿದ್ದು, ಇಲ್ಲಿ ಫಲಿತಾಂಶವು ಆಕಸ್ಮಿಕವಾಗಿ ನಿರ್ಧಾರವಾಗುತ್ತದೆ ಎಂದು ಈ ಕರಡು ಮಸೂದೆಯಲ್ಲಿ ವಿವರಿಸಲಾಗಿದೆ.

ಪ್ರಾಧಿಕಾರದಲ್ಲಿ ಯಾರೆಲ್ಲ ಇರುತ್ತಾರೆ?: ಕಾನೂನು, ಸಾರ್ವಜನಿಕ ಆಡಳಿತ ಅಥವಾ ತಂತ್ರಜ್ಞಾನದಲ್ಲಿ ಅನುಭವ ಹೊಂದಿರುವವರನ್ನು ಈ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಬೇಕು. ಮಾಹಿತಿ ತಂತ್ರಜ್ಞಾನ, ಹಣಕಾಸು ಮತ್ತು ಸಮಾಜ ಕಲ್ಯಾಣ ಈ ಮೂರು ಕ್ಷೇತ್ರಗಳಲ್ಲಿ ಅನುಭವ ಇರುವ ತಲಾ ಒಬ್ಬರು (ಒಟ್ಟು ಮೂವರು) ಪ್ರಾಧಿಕಾರದ ಸದಸ್ಯರಾಗಿರುತ್ತಾರೆ ಎಂದೂ ಮಸೂದೆಯಲ್ಲಿದೆ.

₹5 ಲಕ್ಷದವರೆಗೆ ದಂಡ: ಅಕ್ರಮ ಬೆಟ್ಟಿಂಗ್ನಲ್ಲಿ ತೊಡಗಿರುವ ನೋಂದಾಯಿಸದ ಆನ್ಲೈನ್ ವೇದಿಕೆಗಳು ಮತ್ತು ವ್ಯಕ್ತಿಗಳಿಗೆ ಚಟುವಟಿಕೆ ಸ್ಥಗಿತಗೊಳಿಸುವಂತೆ ಪ್ರಾಧಿಕಾರವು ಆದೇಶ ಹೊರಡಿಸಬೇಕು. ಈ ಅಪರಾಧವನ್ನು ಪುನರಾವರ್ತನೆ ಮಾಡಿದರೆ ₹5 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಪ್ರಾಧಿಕಾರವು ನ್ಯಾಯಾಲಯದಿಂದ ವಾರಂಟ್ ಪಡೆದು ಶಂಕಿತ ಅಕ್ರಮ ಬೆಟ್ಟಿಂಗ್ ನಿರ್ವಾಹಕರ ಸ್ಥಳಗಳು, ಸರ್ವರ್ಗಳು ಮತ್ತು ದಾಖಲೆಗಳ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಲೆಕ್ಕಪರಿಶೋಧನೆ ನಡೆಸಬಹುದು. ಪ್ರಾಧಿಕಾರದ ಆದೇಶಗಳ ವಿರುದ್ಧ ಶಂಕಿತ ಅಕ್ರಮ ಬೆಟ್ಟಿಂಗ್ ನಿರ್ವಾಹಕರು 30 ದಿನಗಳ ಒಳಗೆ ಮೇಲ್ಮನವಿಯನ್ನು ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಸಲ್ಲಿಸಬಹುದು. ರಾಜ್ಯ ಸರ್ಕಾರ ಇಂತಹ ಅಪರಾಧಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕೂಡಾ ಈ ಮಸೂದೆ ಅವಕಾಶ ನೀಡಲಿದೆ.

‘ಪ್ರಾಧಿಕಾರ’ದ ಕೆಲಸವೇನು?

ಕೋರ್ಟ್ ತೀರ್ಪುಗಳು ಮತ್ತು ಉದ್ಯಮ ಮಾನದಂಡಗಳ ಆಧಾರದಲ್ಲಿ ‘ಕೌಶಲ ಆಟ’ಗಳು ಮತ್ತು ‘ಅದೃಷ್ಟದ ಆಟ’ಗಳ ವ್ಯತ್ಯಾಸ ಗುರುತಿಸಬೇಕು

ನೋಂದಾಯಿಸದ ಆನ್ಲೈನ್ ವೇದಿಕೆಗಳು ಮತ್ತು ಅಕ್ರಮ ಬೆಟ್ಟಿಂಗ್ ಚಟುವಟಿಕೆ ಮೇಲೆ ನಿಗಾ

ಆನ್ಲೈನ್ ಬೆಟ್ಟಿಂಗ್ನ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಕ್ರಮ

ಕೌಶಲ ಆಧಾರಿತ ಗೇಮಿಂಗ್ ವೇದಿಕೆಗಳನ್ನು ನಿರ್ವಹಿಸುವವರಿಗೆ ಪರವಾನಗಿ

ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ರಾಜ್ಯ ಪೊಲೀಸ್ ಸೈಬರ್ ಅಪರಾಧ ವಿಭಾಗದ ಜೊತೆ ಸೇರಿ ವೆಬ್ಸೈಟ್ಗಳು, ಮೊಬೈಲ್ ಆ್ಯಪ್ಗಳು, ಡಿಜಿಟಲ್ ಸೇವೆಗಳನ್ನು ಒಳಗೊಂಡಂತೆ ನೋಂದಾಯಿಸದ ಆನ್ಲೈನ್ ಬೆಟ್ಟಿಂಗ್ ವೇದಿಕೆಗಳನ್ನು ನಿರ್ಬಂಧಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು

ಪ್ರಾಧಿಕಾರದ ಅಧಿಸೂಚನೆಯ ನಂತರ ನೋಂದಾಯಿಸದ ಆನ್ಲೈನ್ ವೇದಿಕೆಗಳನ್ನು ನಿರ್ಬಂಧಿಸಬೇಕು

ಅಕ್ರಮ ಬೆಟ್ಟಿಂಗ್ ವೇದಿಕೆಗಳ ಹಣಕಾಸು ವಹಿವಾಟು ನಿಷೇಧಿಸಬೇಕು

ಅಕ್ರಮ ಬೆಟ್ಟಿಂಗ್ ವೇದಿಕೆಗಳಿಗೆ ಪ್ರವೇಶ ನಿರ್ಬಂಧಿಸಲು ಜಿಯೋ ಫೆನ್ಸಿಂಗ್ ಮತ್ತು ಐಪಿ ಬ್ಲಾಕಿಂಗ್ ತಂತ್ರಜ್ಞಾನಗಳ ಬಳಕೆ ಕಡ್ಡಾಯಗೊಳಿಸಬೇಕು

ಬೆಟ್ಟಿಂಗ್ಗೆ ಸಂಬಂಧಿಸಿದ ವ್ಯಸನ ಅಥವಾ ಆರ್ಥಿಕ ತೊಂದರೆಗೆ ಒಳಗಾದ ವರಿಗೆ ಸಹಾಯವಾಣಿ ಮತ್ತು ಬೆಂಬಲ ಕಾರ್ಯವಿಧಾನ ಆರಂಭಿಸಬೇಕು

ಅಕ್ರಮ ಆನ್ಲೈನ್ ಬೆಟ್ಟಿಂಗ್ ನಡೆಸುವವರ ಬಗ್ಗೆ ಮಾಹಿತಿ ನೀಡುವ ವ್ಯಕ್ತಿ ಅಥವಾ ಘಟಕಕ್ಕೆ ರಕ್ಷಣೆ ಮತ್ತು ಸೂಕ್ತ ಬಹುಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.