ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ ಮತದಾರರಿಗೆ ಕನ್ನಡವೇ ಸಾಕಲ್ವಾ ಲಿಂಬಾವಳಿ..?

Last Updated 30 ಸೆಪ್ಟೆಂಬರ್ 2018, 11:21 IST
ಅಕ್ಷರ ಗಾತ್ರ

ಬೆಂಗಳೂರು: ಎಂತಹ ಅದ್ಬುತ ಮಾತುಗಳು, ಯಾರಿಗಾಗಿ ಹಿಂದಿಯಲ್ಲಿ ಭಾಷಣ, ನಿಮಗೆ ವೋಟು ಹಾಕಿದವರು ಕನ್ನಡಿಗರಲ್ವಾ..? ಯಾಕೆ ಸ್ವಾಮಿ ನಿಮಗೆ ಕನ್ನಡ ಮಾತೋಡಕೆ ಏನ್‌ ಆಗುತ್ತೆ, ಇದು ಕರ್ನಾಟಕ ಅನ್ನೋದು ಮರೆಯಬೇಡಿ... ನಿಮಗೇನಾದರೂ ಸಾಮಾನ್ಯಜ್ಞಾನ ಇದೆಯಾ? ನೀವು ಮಹದೇವಪುರ ಜನ ಮತ್ತು ಕನ್ನಡಿಗರನ್ನು ಅವಮಾನ ಮಾಡುತ್ತಿದ್ದೀರಿ...

ಫೇಸ್‌ಬುಕ್‌ನಲ್ಲಿಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರನ್ನು ನೆಟ್ಟಿಗರು ಫೇಸ್‌ಬುಕ್‌ನಲ್ಲಿ ತರಾಟೆಗೆ ತೆಗೆದುಕೊಂಡು ಪರಿ ಇದು!

ಅರವಿಂದ್ ಲಿಂಬಾವಳಿ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಹದೇವಪುರ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಹಿಂದಿಯಲ್ಲಿ ಮಾತನಾಡಿರುವ ವಿಡಿಯೊ ಪೋಸ್ಟ್‌ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರವಿಂದ ಲಿಂಬಾವಳಿ ಅವರು ಮಹದೇವಪುರ ಅಭಿವೃದ್ಧಿ ಕುರಿತಂತೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಿರುವ ಮೂರು ವಿಡಿಯೊಗಳನ್ನು ಪ್ರಕಟಿಸಿದ್ದರು. ಹಿಂದಿ ಭಾಷೆಯಲ್ಲಿನ ವಿಡಿಯೊ ಮತ್ತುಸ್ಟೇಟಸ್‌ ಹಾಕಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಮಹದೇವಪುರ ಕ್ಷೇತ್ರ ಅಭಿವೃದ್ಧಿ ಕುರಿತಂತೆ ಲಿಂಬಾವಳಿ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಹೇಳಿದ ಹಾಗೇ ಕ್ಷೇತ್ರದ ಅಭಿವೃದ್ಧಿಗಾಗಿ ಟಾಸ್ಕ್‌ಪೋರ್ಸ್ ನಿರ್ಮಾಣ ಮಾಡಲಾಗುತ್ತಿದೆ. ಪರಿಸರ, ಸಂಚಾರ, ಮೂಲಸೌಕರ್ಯ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕಾರ್ಯಪಡೆಗಳನ್ನು ರಚನೆ ಮಾಡಲಾಗುವುದು. ಕ್ಷೇತ್ರದ ಆಸಕ್ತ ಸ್ವಯಂ ಸೇವಕರು ಹೆಸರು ನೋಂದಾಣಿ ಮಾಡಿಕೊಂಡು ಕಾರ್ಯಪಡೆಗೆ ಸೇರಿ ಜನಪರ ಕೆಲಸಗಳನ್ನು ಮಾಡಬೇಕು. ಹಾಗೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಯಲ್ಲಿ ಸೇರಿಕೊಂಡು ರಚನಾತ್ಮಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂದು ಲಿಂಬಾವಳಿ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.

ವಿವಾದ ಯಾಕೆ...?

ಅರವಿಂದ ಲಿಂಬಾವಳಿ ಕ್ಷೇತ್ರದ ಸರ್ವತೋಮುಖ ಬೆಳವಣಿಗೆ ಬಗ್ಗೆ ವಿಡಿಯೊದಲ್ಲಿ ಮಾತನಾಡಿದ್ದಾರೆ. ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡಿರುವ ಮೂರು ವಿಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಆದರೆ ಹಿಂದಿ ವಿಡಿಯೊ ಪೋಸ್ಟ್‌ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ದ್ವಿಭಾಷಾ ಪದ್ಧತಿ ಜಾರಿಯಲ್ಲಿರುವಾಗ ಹಿಂದಿ ಭಾಷೆಯ ವಿಡಿಯೊವನ್ನು ಅಪ್‌ಲೋಡ್‌ ಮಾಡಿರುವುದರ ಔಚಿತ್ಯ ಏನು? ಯಾರನ್ನು ಮೆಚ್ಚಿಸಲಿಕ್ಕೆ ಹಿಂದಿ ವಿಡಿಯೊವನ್ನು ಪೋಸ್ಟ್ ಮಾಡಿದ್ದೀರಾ? ಎಂದು ಎಂ.ಪಿ.ರಘು ಎಂಬುವರು ಪ್ರಶ್ನೆ ಮಾಡಿದ್ದಾರೆ.

ಲಿಂಬಾವಳಿ ಅವರು ಮೂರು ವಿಡಿಯೊಗಳನ್ನು ಶನಿವಾರ ಪ್ರಕಟಿಸಿದ್ದಾರೆ. ಇಲ್ಲಿಯವರೆಗೆ ಕನ್ನಡ ವಿಡಿಯೊವನ್ನು 5.4 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ. ಇದನ್ನು 281 ಜನ ಲೈಕ್ ಮಾಡಿದ್ದು, 43 ಜನರು ಹಂಚಿಕೊಂಡು, 17 ಜನರು ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ಹಿಂದಿ ಭಾಷೆಯ ವಿಡಿಯೊಗೆ 80ಕ್ಕೂ ಹೆಚ್ಚು ಜನರು ಆಕ್ರೋಶ ವ್ಯಕ್ತಪಡಿಸಿ ಸ್ಟೇಟಸ್‌ ಹಾಕಿದ್ದಾರೆ. ಹಿಂದಿ ವಿಡಿಯೊವನ್ನು 4.9 ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ.

ಹಿಂದಿ ವಿಡಿಯೊಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಕ್ರಿಯಿಸಿರುವ ಕೆಲವು ಪೋಸ್ಟ್‌ಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT