ನವದೆಹಲಿ: ಶತಾವಧಾನಿ ಆರ್. ಗಣೇಶ್ ಸೇರಿದಂತೆ ರಾಜ್ಯದ ಎಂಟು ಸಾಧಕರು ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಗಣರಾಜ್ಯೋತ್ಸವದ ಮುನ್ನಾ ದಿನವಾದ ಭಾನುವಾರ ಕೇಂದ್ರ ಗೃಹ ಸಚಿವಾಲಯ 2026ರ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿತು. 5 ಸಾಧಕರು ‘ಪದ್ಮವಿಭೂಷಣ’, 13 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರೀ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಎಂ.ಅಂಕೇಗೌಡ, ಎಸ್.ಜಿ.ಸುಶೀಲಮ್ಮ (ಸಮಾಜ ಸೇವೆ), ಪ್ರಭಾಕರ ಕೋರೆ, ಶಶಿ ಶೇಖರ್ ವೆಂಪತಿ (ಸಾಹಿತ್ಯ ಮತ್ತು ಶಿಕ್ಷಣ), ಡಾ.ಸುರೇಶ್ ಹನಗವಾಡಿ (ವೈದ್ಯಕೀಯ), ಶುಭಾ ವೆಂಕಟೇಶ್ ಅಯ್ಯಂಗಾರ್ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಮತ್ತು ಟಿ.ಟಿ.ಜಗನ್ನಾಥನ್ (ಮರಣೋತ್ತರವಾಗಿ; ವ್ಯಾಪಾರ ಮತ್ತು ಕೈಗಾರಿಕೆ) ಅವರಿಗೆ ‘ಪದ್ಮಶ್ರೀ’ ಗೌರವ ಒಲಿದಿದೆ.

ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೇರಳದ ಕೆ.ಟಿ ಥಾಮಸ್ (ಸಾರ್ವಜನಿಕ ವ್ಯವಹಾರ), ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಮತ್ತು ವಯೊಲಿನ್ ವಾದಕ ಉತ್ತರ ಪ್ರದೇಶದ ಎನ್.ರಾಜಮ್ (ಕಲೆ) ಹಾಗೂ ಹಿರಿಯ ಪತ್ರಕರ್ತ ಕೇರಳದ ಪಿ.ನಾರಾಯಣನ್ (ಸಾಹಿತ್ಯ ಮತ್ತು ಶಿಕ್ಷಣ) ಅವರು ‘ಪದ್ಮವಿಭೂಷಣ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಹಾಗೂ ಬಾಲಿವುಡ್ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ‘ಪದ್ಮವಿಭೂಷಣ’ ನೀಡಿ ಗೌರವಿಸಲಾಗಿದೆ. ಮಲಯಾಳ ನಟ ಮಮ್ಮುಟ್ಟಿ, ಗಾಯಕಿ ಅಲ್ಕಾ ಯಾಜ್ಞಿಕ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ, ಕೋಟಕ್ ಮಹೀಂದ್ರ ಬ್ಯಾಂಕ್ನ ಸಂಸ್ಥಾಪಕ ಉದಯ್ ಕೋಟಕ್ ಅವರು ‘ಪದ್ಮಭೂಷಣ’ಕ್ಕೆ ಆಯ್ಕೆಯಾಗಿದ್ದಾರೆ.

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆ, ಸಮರ್ಪಣೆ ಮತ್ತು ಸೇವೆಯು ನಮ್ಮ ಸಮಾಜವನ್ನು ಸಮೃದ್ಧಿಗೊಳಿಸಿದೆ.
ನರೇಂದ್ರ ಮೋದಿ, ಪ್ರಧಾನಿ

ಟೆನಿಸ್ ದಂತಕಥೆ ವಿಜಯ್ ಅಮೃತ್ರಾಜ್ ಮತ್ತು ಕ್ರಿಕೆಟಿಗ ರೋಹಿತ್ ಶರ್ಮಾ ಸೇರಿದಂತೆ ಎಂಟು ಕ್ರೀಡಾಪಟುಗಳು ಈ ಬಾರಿ ‘ಪದ್ಮ’ ಪುರಸ್ಕೃತರಲ್ಲಿ ಸೇರಿದ್ದಾರೆ.

ಬಿಜೆಪಿ ಹಿರಿಯ ನಾಯಕ ವಿ.ಕೆ.ಮಲ್ಹೋತ್ರ, ಜೆಎಂಎಂ ಸ್ಥಾಪಕ ಮತ್ತು ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್, ದೇಶದ ಜಾಹೀರಾತು ಲೋಕಕ್ಕೆ ವಿಶೇಷ ಮೆರುಗು ತುಂಬಿದ್ದ ಪೀಯೂಷ್ ಪಾಂಡೆ ಅವರಿಗೆ ಮರಣೋತ್ತರವಾಗಿ ‘ಪದ್ಮಭೂಷಣ’ ಗೌರವ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರು ಮತ್ತು ಆರು ಮಂದಿ ಅನಿವಾಸಿ ಭಾರತೀಯರು ಸೇರಿದ್ದಾರೆ. 16 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಹಲವಾರು ಬುಡಕಟ್ಟು ಜನಾಂಗದವರು, ಸಾಂಪ್ರದಾಯಿಕ ಔಷಧಿ ನೀಡುವವರು, ಕಲಾ ಸಾಧಕರು ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.

ವೀರಪ್ಪನ್ನನ್ನು ‘ಬೇಟೆ’ಯಾಡಿದ್ದ ಅಧಿಕಾರಿಗೆ ‘ಪದ್ಮಶ್ರೀ’

ಚೆನ್ನೈ: ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ನಿವೃತ್ತ ಐಪಿಎಸ್ ಅಧಿಕಾರಿ ಕೆ. ವಿಜಯ್ ಕುಮಾರ್ ಅವರು ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಿಂದ ಹೆಸರುವಾಸಿಯಾಗಿದ್ದಾರೆ.

2004ರಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಬಳಿ ತಮಿಳುನಾಡಿನ ಆಗಿನ ಎಸ್ಟಿಎಫ್ ಮುಖ್ಯಸ್ಥರಾಗಿದ್ದ ವಿಜಯ್ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವೀರಪ್ಪನ್ನನ್ನು ಹತ್ಯೆ ಮಾಡಿತ್ತು.

73 ವರ್ಷದ ಅವರು 2010ರಿಂದ ಎರಡು ವರ್ಷ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ನೇತೃತ್ವ ವಹಿಸಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲಹೆಗಾರ ರಾಗಿಯೂ ಕೆಲಸ ಮಾಡಿದ್ದಾರೆ.
.ನಿಜ ಸಾಧಕರನ್ನು ಪುರಸ್ಕರಿಸುತ್ತಿದೆ ಪದ್ಮ ಪ್ರಶಸ್ತಿ: ಪ್ರಲ್ಹಾದ ಜೋಶಿ .ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.