ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ರಸ್ತೆ ಹೇಗಿರಬೇಕು? ನಿಯಮವೇನು?

Last Updated 3 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗ್ರೇಡ್‌ 80/100 ಬಿಟುಮಿನ್‌ (ಜಲ್ಲಿಕಲ್ಲಿನಂತೆ ಕಪ್ಪಗಿರುವ ಸಾಮಗ್ರಿ) ಬಳಸಬೇಕು. ತಂಪು ವಾತಾವರಣದಲ್ಲಿ ಗ್ರೇಡ್‌ 30/40 ಬಿಟುಮಿನ್‌ ಬಳಸಬೇಕು. ಬಿಟುಮಿನ್‌ ಹಾಕುವ ಮೊದಲು ಮತ್ತು ನಂತರ ರೋಲರ್‌ಗಳಲ್ಲಿ 10ರಿಂದ 20 ಬಾರಿ ಕಾಂಪ್ಯಾಕ್ಷನ್‌ ಮಾಡಬೇಕು. ಬಿಟುಮಿನ್‌ ರಸ್ತೆಗೆ ಹಾಕುವಾಗ140 ಡಿಗ್ರಿಯಿಂದ 165 ಡಿಗ್ರಿ ಉಷ್ಣಾಂಶ ಹೊಂದಿರಬೇಕು. ಅಂಟುಪದರಗಳನ್ನು ಅಗತ್ಯಕ್ಕೆ ಅನುಸಾರವಾಗಿ ಸರಿಯಾದ ಪ್ರಮಾಣದಲ್ಲಿ ಬಳಸಬೇಕು.ರಸ್ತೆಯಲ್ಲಿ ನೀರು ನಿಲ್ಲದಂತೆ ಇಳಿಜಾರು ಇರಬೇಕು. ರಸ್ತೆ ಬದಿಯೂ ನೀರು ನಿಲ್ಲದಂತೆ ಶೋಲ್ಡರ್‌ ಡ್ರೈನ್‌, ಚರಂಡಿಗಳ ನಿರ್ಮಾಣವಾಗಬೇಕು ಎಂಬುದು ಐಆರ್‌ಸಿ ನಿಯಮ.

ರಸ್ತೆ ಗುಂಡಿ ದುರಸ್ತಿ: ರಸ್ತೆ ಗುಂಡಿ ದುರಸ್ತಿ ಸಂದರ್ಭದಲ್ಲಿ ಗುಂಡಿ ಸುತ್ತಲು ಆಯತಾಕಾರದಲ್ಲಿ (ರೆಕ್ಟಾಂಗಲ್‌) ರಸ್ತೆ ಅಗೆದುಕೊಂಡು, ಮೂಲವಾಗಿ ಹಾಕ
ಲಾಗಿರುವ ಪದರ ಕಾಣುವಂತಾಗಬೇಕು. ನಂತರ ಅಲ್ಲಿರುವ ಎಲ್ಲ ದೂಳು ತೆಗೆದು ಅಂಟು ಪದರವನ್ನು ಹಾಕಬೇಕು. ಬಿಟುಮಿನ್‌ ಹಾಕಿ ನಂತರ ಸೀಲೆಂಟ್‌ ಅಥವಾಎಮಲ್ಷನ್‌ ಹಾಕಬೇಕು. ಸೂಕ್ತ ರೀತಿಯಲ್ಲಿ ಕಾಂಪ್ಯಾಕ್ಷನ್‌ ಮಾಡಬೇಕು.

‘ರಸ್ತೆ ನಿರ್ಮಾಣ ಅಥವಾ ರಸ್ತೆ ಮೇಲ್ಮೈ ಅಭಿವೃದ್ಧಿ ಸಂದರ್ಭದಲ್ಲಿ ಎಲ್ಲ
ರೀತಿಯ ತಪಾಸಣೆ ಮಾಡಬೇಕಿದೆ. ಒಂದು ಯೋಜನೆಗೆ ನಿರ್ವಹಣಾ ಸಂಸ್ಥೆ ಇರುತ್ತದೆ. ಗುತ್ತಿಗೆದಾರರಿರುತ್ತಾರೆ. ಸೈಟ್‌ ಎಂಜಿನಿಯರ್‌ ಇರುತ್ತಾರೆ. ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಯುತ್ತದೆ. ಪ್ರತಿ ಚದರ ಅಡಿಗೆ ತಪಾಸಣೆಯಾಗಬೇಕು. ಆದರೆ ಇದ್ಯಾವುದೂ ನಿಯಮಾನುಸಾರ ನಡೆಯದೇ ಇರುವುದರಿಂದ ಕಾಮಗಾರಿ ಕಳಪೆಯಾಗುತ್ತದೆ. ಲೋಕೋಪಯೋಗಿ ಇಲಾಖೆಯ ಕೋಡಲ್‌ ರೂಲ್‌ ಪ್ರಕಾರ, ಇದರ ಜವಾಬ್ದಾರಿ ಸಹಾಯಕ ಎಂಜಿನಿಯರ್‌ (ಎಇ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌
ಗಳದ್ದೇ (ಎಇಇ). ಕಾರ್ಯಪಾಲಕ ಎಂಜಿನಿಯರ್‌ಗೂ (ಇಇ) ಸಮನಾಂತರ ಜವಾಬ್ದಾರಿ ಇರುತ್ತದೆ. ಇವರ ಮೇಲೆ ಕ್ರಮ ಕೈಗೊಳ್ಳಬಹುದು’ ಎಂದು ಹಿರಿಯ ಎಂಜಿನಿಯರ್‌ಗಳೇ ಹೇಳುತ್ತಾರೆ. ‘ಯಾವುದೇ ಇಲಾಖೆಯಲ್ಲಿ ಕಳಪೆ ಕಾಮಗಾರಿ ನಡೆದರೆ ಆಂತರಿಕವಾಗಿ ತನಿಖೆ ನಡೆಸಿ ಶಿಕ್ಷೆ ನೀಡಬಹುದು. ಎಂಜಿನಿಯರ್‌ಗಳಿಗೆ ಬಡ್ತಿ, ವೇತನ ಹೆಚ್ಚಳ ತಡೆಯಬಹುದು, ಕಡಿಮೆಯನ್ನೂ ಮಾಡಬಹುದು. ಇನ್ನು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಯಾವುದೇ ಕಾಮಗಾರಿ ನೀಡದಂತೆ ಮಾಡಬಹುದು. ಇವೆಲ್ಲವೂ ನಿಯಮಗಳ ಪುಸ್ತಕದಲ್ಲಿವೆ. ಇವೆಲ್ಲ ಆಚರಣೆಯಲ್ಲಿ ಇಲ್ಲದ ಕಾರಣ ಈ ವರ್ಷ ನಿರ್ಮಾಣವಾದ ರಸ್ತೆಯಲ್ಲಿ ಮುಂದಿನ ವರ್ಷವೇ ಗುಂಡಿಗಳಾಗುತ್ತವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT