ತುಮಕೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಧಾನ್ಯಗಳನ್ನು‘ಶ್ರೀ ಅನ್ನ’ ಎಂದು ಸಂಭೋದಿಸಿದ ಕಾರಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಚ್ಚಿಟ್ಟಿದ್ದಾರೆ.

ಆ ಪದವನ್ನು ಕರ್ನಾಟಕದಿಂದಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಬಳಸುವ ‘ಸಿರಿ ಧಾನ್ಯ’ಪದದ ಆಡುಮಾತಿನ ರೂಪವೇ‘ಶ್ರೀ ಧಾನ್ಯ’ಎಂಬುದಾಗಿದೆ. ಕರ್ನಾಟಕದ ಜನರು ಧಾನ್ಯದ ಮಹತ್ವ ಅರಿತಿದ್ದಾರೆ. ಅದಕ್ಕಾಗಿಯೇ ಅವುಗಳನ್ನು ಸಿರಿ ಧಾನ್ಯ ಎಂದು ಕರೆಯುತ್ತಾರೆ. ಕರ್ನಾಟಕದ ಜನರ ಭಾವನೆಗಳನ್ನು ಗೌರವಿಸುತ್ತಾ ದೇಶವು ಧಾನ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಧಾನ್ಯಗಳನ್ನು ಈಗ ದೇಶದಾದ್ಯಂತ ‘ಶ್ರೀ ಅನ್ನ’ ಎಂದು ಗೌರವಿಸಲಾಗುತ್ತದೆ. ಶ್ರೀ ಅನ್ನ ಎಂದರೆ ಆಹಾರ ಪದಾರ್ಥಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಎಂದು ಮೋದಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಕ್ಕೆ ನರೇಂದ್ರ ಮೋದಿ, ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮೂರನೇ ಬಾರಿ ಭೇಟಿ ನೀಡಿದ್ದಾರೆ.

ಅಲ್ಲದೆ, ಫೆಬ್ರುವರಿ 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಏರೊ ಶೋ, ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಮತ್ತೆ ಆಗಮಿಸಲಿದ್ದಾರೆ.

ಕರ್ನಾಟಕದಲ್ಲಿ ಪೋಷಕಾಂಶಭರಿತ ರಾಗಿ, ನವಣೆ, ಸಾಮೆ, ಸಜ್ಜೆ, ಬಿಳಿ ಜೋಳ ಮುಂತಾದ ಧಾನ್ಯಗಳನ್ನು ಬೆಳೆಯಲಾಗುತ್ತದೆ ಎಂದು ಮೋದಿ ಹೇಳಿದರು.

ರಾಗಿ ಮುದ್ದೆ, ರಾಗಿ ರೊಟ್ಟಿಯ ರುಚಿಯನ್ನು ಮರೆಯಲು ಸಾಧ್ಯವೇ?. ಈ ಬಾರಿಯ ಬಜೆಟ್‌ನಲ್ಲಿ ಶ್ರೀ ಅನ್ನ ಉತ್ಪಾದನೆಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಬೆಳೆಯುವ ಸಿರಿಧಾನ್ಯಗಳು ರುಚಿ ಮಾತ್ರವಲ್ಲದೆ, ಆರೋಗ್ಯಕರವೂ ಹೌದು. ಇದರಲ್ಲಿ ಹಲವು ಪೋಷಕಾಂಶಗಳು ಇವೆ ಎಂದು ಒತ್ತಿ ಹೇಳಿದರು.

ಇವನ್ನೂ ಓದಿ..

Video: ಕರ್ನಾಟಕದಲ್ಲಿ ಯೋಜನೆಗಳ ಮೂಲಕ ಕಮಲ ಅರಳಿಸುತ್ತಾರಾ ಮೋದಿ!

ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬನೆ: ಹೆಲಿಕಾಪ್ಟರ್ ಘಟಕ ಉದ್ಘಾಟಿಸಿ ಮೋದಿ ಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.