ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಗಾಲಿ ಕುರ್ಚಿಯಲ್ಲಿ ಬಂದ ದೇವೇಗೌಡರು

Last Updated 18 ಜುಲೈ 2022, 17:59 IST
ಅಕ್ಷರ ಗಾತ್ರ

ಬೆಂಗಳೂರು: ಗಾಲಿ ಕುರ್ಚಿಯಲ್ಲಿ ಬಂದು ಹಕ್ಕು ಚಲಾಯಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಮತಗಟ್ಟೆ ಬಳಿ ಮುಖಾಮುಖಿಯಾದ ಸಿದ್ದರಾಮಯ್ಯ– ಶ್ರೀನಿವಾಸ ಪ್ರಸಾದ್‌, ಕಾಂಗ್ರೆಸ್‌ ಶಾಸಕ ಬೈರತಿ ಸುರೇಶ್‌ ಕೊರಳಿಗೆ ಕೇಸರಿ ಶಾಲು...

– ಇವು ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ವಿಧಾನಸೌಧದಲ್ಲಿ ನಡೆದ ಮತದಾನದ ವೇಳೆ ಕಂಡ ವಿಶೇಷಗಳು. ಬಿಜೆಪಿಯ ಬಹುತೇಕ ಶಾಸಕರು ಕೇಸರಿ ಶಾಲು ಧರಿಸಿಕೊಂಡು ಬಂದು ಮತದಾನ ಮಾಡಿದರು.

ರಾಜ್ಯದ 224 ಚುನಾಯಿತ ಶಾಸಕರು ವಿಧಾನಸೌಧದ ಮೊದಲ ಮಹಡಿಯಲ್ಲಿನ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಮತ್ತು ರಾಜ್ಯಸಭಾ ಸದಸ್ಯರಾಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಇಲ್ಲಿಯೇ ಮತ ಚಲಾಯಿಸಲು ಅನುಮತಿ ಪಡೆದಿದ್ದರು. ಅವರೂ ತಮ್ಮ ಹಕ್ಕು ಚಲಾಯಿಸಿದರು.

ಗಾಲಿ ಕುರ್ಚಿಯಲ್ಲಿ ಕುಳಿತು ಮತದಾನ: ದೇವೇಗೌಡರು ಅನಾರೋಗ್ಯದ ಕಾರಣದಿಂದ ಬೆಂಗಳೂರಿನಲ್ಲೇ ಮತದಾನ ಮಾಡಲು ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆದಿದ್ದರು. ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಕಾರಿನಲ್ಲಿ ವಿಧಾನಸೌಧದವರೆಗೆ ಬಂದ ಅವರನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿ ಮತಗಟ್ಟೆಗೆ ಕರೆದೊಯ್ಯಲಾಯಿತು. ಗಾಲಿ ಕುರ್ಚಿಯಲ್ಲೇ ಕುಳಿತು ಅವರು ಮತ ಚಲಾಯಿಸಿದರು.

ದೀರ್ಘ ಕಾಲದ ಬಳಿಕ ಮುಖಾಮುಖಿ: ಕಂದಾಯ ಸಚಿವರ ಸ್ಥಾನದಿಂದ ಕೈಬಿಟ್ಟ ಬಳಿಕ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಶ್ರೀನಿವಾಸ ಪ್ರಸಾದ್‌, ಆಗಾಗ ವಾಗ್ದಾಳಿ ನಡೆಸುತ್ತಲೇ ಇದ್ದರು. ಆ ಬಳಿಕ ಇಬ್ಬರೂ ಮುಖಾಮುಖಿ ಆಗಿದ್ದು ಕಡಿಮೆ. ರಾಷ್ಟ್ರಪತಿ ಚುನಾವಣೆಯ ಮತಗಟ್ಟೆ ಬಳಿ ಮುಖಾಮುಖಿಯಾದ ಇಬ್ಬರೂ ನಗುತ್ತಾ ಹಸ್ತಲಾಘವ ಮಾಡಿದರು.

ಶ್ರೀನಿವಾಸ ಪ್ರಸಾದ್‌ ಮೈಸೂರಿನಿಂದ ಬಂದು ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿ ಹಿಂದಿರುಗುತ್ತಿದ್ದರು. ಅದೇ ವೇಳೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತಗಟ್ಟೆಯತ್ತ ಹೊರಟಿದ್ದರು. ವಿಧಾನಸೌಧದ ಮೊಗಸಾಲೆಯಲ್ಲಿ ಇಬ್ಬರೂ ಮುಖಾಮುಖಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT