ಹೂವಿನಹಡಗಲಿ: ದೇಶದ ಮೂಲ ನಿವಾಸಿಗಳನ್ನು ಜನಾಂಗೀಯ ಆಧಾರದಲ್ಲಿ ವಿಭಜಿಸುವ ಸಂವಿಧಾನ ವಿರೋಧಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಶಾಸಕ ಶಿರಾಜ್ ಶೇಖ್ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆ ಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿ ಭಟನಾ ರ‍್ಯಾಲಿಯಲ್ಲಿ ಮಾತನಾಡಿದರು.

‘ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. 30 ಸಾವಿರಕ್ಕೂ ಹೆಚ್ಚು ಮುಸ್ಲಿಮರು ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಚರಿತ್ರೆ ಗೊತ್ತಿಲ್ಲದ ಮೋದಿ, ಅಮಿತ್ ಶಾ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ, ಓಟಿಗಾಗಿ ವೈಷಮ್ಯ ಬಿತ್ತುತ್ತಿದ್ದಾರೆ ಎಂದು ಕಿಡಿ ಕಾರಿದರು.

ಅಸ್ಸಾಂನಂಥ ಚಿಕ್ಕ ರಾಜ್ಯದಲ್ಲಿ 19 ಲಕ್ಷ ಜನರಿಗೆ ಪೌರತ್ವ ನೋಂದಣಿ ದಾಖಲೆ ಕೊಡಲು ಸಾಧ್ಯವಾಗಿಲ್ಲ. ಇದರಲ್ಲಿ ಮುಸ್ಲಿಮರು 4 ಲಕ್ಷ ಇದ್ದರೆ, 15 ಲಕ್ಷ ಜನ ಮುಸ್ಲಿಮೇತರರು ಇದ್ದಾರೆ. ಚಿಕ್ಕ ರಾಜ್ಯದ ನೋಂದಣಿ ಪ್ರಕ್ರಿಯೆಗೆ ₹1600 ಕೋಟಿ ಖರ್ಚಾಗಿದೆ. ಇಡೀ ದೇಶದ ನೋಂದಣಿಗೆ ₹55 ಸಾವಿರ ಕೋಟಿ ಬೇಕು. ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಇಷ್ಟೊಂದು ಹಣ ಖರ್ಚು ಮಾಡುವ ಈ ಕಾಯ್ದೆ ಯಾವ ಪುರುಷಾರ್ಥಕ್ಕೆ ಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.