ಬಾಗಲಕೋಟೆ: ’ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯೇ.. ಈಗ ಅವರ ವರ್ತನೆ ಬೇಸರ ತರಿಸಿದೆ. ಹಾದಿ ಬೀದಿಯಲ್ಲಿ ಹೋಗುವವರನ್ನು ಕರೆದು ಮಾತನಾಡಿಸುವ ಅವರು, ಕಳೆದ ಎರಡೂವರೆ ತಿಂಗಳಿನಿಂದ ದೆಹಲಿಯಲ್ಲಿ ಮಳೆ–ಚಳಿಯಲ್ಲಿ ಕುಳಿತ ರೈತರ ಸಂಕಷ್ಟ ಆಲಿಸುತ್ತಿಲ್ಲವೇಕೆ‘

ಇದು ತಾಲ್ಲೂಕಿನ ಮುಗಳೊಳ್ಳಿ ಗ್ರಾಮದ ಭೀಮನಗೌಡ ಬಜಣ್ಣವರ ಅವರ ಪ್ರಶ್ನೆ..

ಕೇಂದ್ರದ ಕೃಷಿ ಕಾಯ್ದೆಗಳ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಭೀಮನಗೌಡ ಶನಿವಾರ ಮಧ್ಯಾಹ್ನ ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದರು.

ಕೃಷಿ ಕಾಯ್ದೆಗಳ ಬಗ್ಗೆ ಸಾಮಾನ್ಯ ಜನರಿಗೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಅರ್ಥವಾಗಿದೆ. ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಖಾಸಗಿಯವರಿಗೆ ಒಪ್ಪಿಸಲಿ. ಕಾಯ್ದೆಯನ್ನು ಒಪ್ಪಿಕೊಂಡು ನನ್ನ ಹೊಲ ಮನೆಯನ್ನು ಕಾರ್ಪೊರೇಟ್ ಕಂಪೆನಿಗಳ ಕೈಗೆ ಕೊಡಲು ಸಿದ್ಧನಿಲ್ಲ ಎಂದರು.

ಅಚ್ಚರಿ ಎಂದರೆ ಭೀಮನಗೌಡ ಅವರಿಗೆ ಸ್ವಂತ ಜಮೀನು ಇಲ್ಲ. ಇದ್ದ ಒಂದು ಎಕರೆಯೂ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆ ಆಗಿದೆ. ’ಬೇರೆಯವರ ಜಮೀನು ಲಾವಣಿ ಹಿಡಿದು ಅದರಲ್ಲಿ ಜೋಳ, ಕಡಲೆ, ಶೇಂಗಾ ಬೆಳೆಯುತ್ತೇನೆ. ಜೊತೆಗೆ ಬಾಂಡ್ ರೈಟರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ‘ ಎಂದು ಹೇಳಿಕೊಂಡರು.ಭೀಮನಗೌಡ ಅವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.