ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜದ ಬದಲಾವಣೆ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಹೆಚ್ಚು ಮಾತನಾಡುತ್ತಿದ್ದರು: ಸಿಎಂ

Published : 29 ಆಗಸ್ಟ್ 2024, 15:25 IST
Last Updated : 29 ಆಗಸ್ಟ್ 2024, 15:25 IST
ಫಾಲೋ ಮಾಡಿ
Comments

ಬೆಂಗಳೂರು: ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಒಬ್ಬ ಸಾಹಿತ್ಯದ ಬಗ್ಗೆ ಮಾತನಾಡುವುದಕ್ಕಿಂತಲೂ ಸಮಾಜದಲ್ಲಿ ಆಗಬೇಕಾದ ಬದಲಾವಣೆ ಕುರಿತು ಹೆಚ್ಚು ಮಾತನಾಡುತ್ತಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಮುನಿಸ್ವಾಮಿ ಅಂಡ್ ಸನ್ಸ್ , ಎಂ.ಚಂದ್ರಶೇಖರ್ ಪ್ರತಿಷ್ಠಾನ ಬೆಂಗಳೂರು ಹಾಗೂ ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’–ಹದಿನಾಲ್ಕು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ತೇಜಸ್ವಿಗೆ ಮೈಸೂರಿನಲ್ಲಿ ರಾಮದಾಸ್‌ ಎಂಬ ಪ್ರಾಧ್ಯಾಪಕ ಸ್ನೇಹಿತರಿದ್ದರು. ಅವರ ಮನೆಗೆ ತೇಜಸ್ವಿ ಬಂದಾಗಲೆಲ್ಲಾ ನಾನೂ ಹೋಗುತ್ತಿದ್ದೆ. ಹಲವು ಬಾರಿ ದೇವನೂರ ಮಹಾದೇವ ಬರುತ್ತಿದ್ದರು. ಸಾಮಾಜಿಕ ಬದಲಾವಣೆ ಬಗ್ಗೆ ಅಲ್ಲಿ ಚರ್ಚೆಯಾಗುತ್ತಿತ್ತು. ತೇಜಸ್ವಿ ಅವರ ಮಾತು ಕೇಳಲು ನಾನು ಉತ್ಸುಕನಾಗಿರುತ್ತಿದ್ದೆ’ ಎಂದು ನೆನಪಿಸಿಕೊಂಡರು.

‘ತಮ್ಮ ತೋಟಕ್ಕೆ ಬಂದು ಒಂದು ದಿನ ಕಳೆಯಿರಿ ಎಂದು ತೇಜಸ್ವಿ ಹಲವು ಬಾರಿ ಹೇಳಿದ್ದರು. ಅದು ಸಾಧ್ಯವೇ ಆಗಲಿಲ್ಲ. ಅವರ ಕಾಲಾನಂತರದಲ್ಲಿ ಅವರ ಮನೆಗೆ ಹೋಗಿ ಊಟ ಮಾಡಿ ಬಂದೆ’ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ವಿಚಾರ ವೇದಿಕೆಯ ಅಧ್ಯಕ್ಷ ಎಂ.ಸಿ ನರೇಂದ್ರ, ಪ್ರೊ.ರವಿವರ್ಮ ಕುಮಾರ್, ಸಮಗ್ರ ಸಂಪುಟದ ಸಂಪಾದಕ ಕೆ.ಸಿ.ಶಿವಾರೆಡ್ಡಿ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ.ಕೃಷ್ಣಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT