ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ರಸ್ತೆ ಅಪಘಾತ: ಐವರ ಸಾವು

Last Updated 23 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ತೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗುರುವಾರ ಸಂಜೆ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಮಗು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯತ್ತ ಹೊರಟಿದ್ದ ಫಿಯೆಟ್ ಪುಂಟೊ ಕಾರು ತೇಗೂರು ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯನ್ನು ತಪ್ಪಿಸಲು ಹೋಗಿ ಮುಂದಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿ ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದ ಅವರಾದಿ ಗ್ರಾಮದ ನಾಗಪ್ಪ ಮುದ್ದೋಜಿ (29), ಮಹಾಂತೇಶ ಮುದ್ದೋಜಿ (40), ನಿಚ್ಚಣಕಿ ಗ್ರಾಮದ ಬಸವರಾಜ ನರಗುಂದ (35) ಹಾಗೂ ಶ್ರೀಕುಮಾರ ನರಗುಂದ (5), ಪಾದಚಾರಿ ಹೆಬ್ಬಳ್ಳಿ ಗ್ರಾಮದ ಈರಣ್ಣಾ ರಾಮನಗೌಡರ (35) ಮೃತಪಟ್ಟವರು.

ಗಾಯಗೊಂಡವರಲ್ಲಿ ಶ್ರವಣಕುಮಾರ ನರಗುಂದ (7), ಮಡಿವಾಳಪ್ಪ ಅಳ್ನಾವರ (22) ಎಂಬುವವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಅವರಾದಿಯ ಪ್ರಕಾಶ ಗೌಡ ಪಾಟೀಲ (22) ಹಾಗೂ ಮಂಜುನಾಥ ಮುದ್ದೋಜಿ (22) ಎಂಬುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಗರಗ ಠಾಣೆ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

‘ಅಗ್ನಿವೀರ’ನ ಕುಟುಂಬದಲ್ಲಿ ಮಡುಗಟ್ಟಿದ ಶೋಕ: ಅಗ್ನಿವೀರನಾಗಿ ಆಯ್ಕೆಯಾಗಿದ್ದ ಮಂಜುನಾಥ ಮುದ್ದೋಜಿ ಎಂಬುವವರನ್ನು ಹುಬ್ಬಳ್ಳಿಗೆ ಬಿಡಲು ಅವರಾದಿಯಿಂದ ಸಂಭ್ರಮದಲ್ಲಿ ಹೊರಟಿದ್ದವರಲ್ಲಿ ನಾಲ್ವರು ದಾರುಣ ಸಾವು ಕಂಡಿದ್ದಾರೆ.

ಸೇನೆ ಸೇರುವ ಸಂಭ್ರಮದಲ್ಲಿದ್ದ ಮುದ್ದೋಜಿ ಕುಟುಂಬದವರು ಮಂಜುನಾಥ ಅವರನ್ನು ಹುಬ್ಬಳ್ಳಿಗೆ ಬಿಟ್ಟುಬರುಲು ಹೊರಟಿದ್ದರು. ಆದರೆ ತೇಗೂರು ಸಮೀಪ ಇವರ ಸಂಭ್ರಮವನ್ನು ಜವರಾಯ ಕಸಿದುಕೊಂಡಿದ್ದಾನೆ. ಐದು ವರ್ಷದ ಕಂದಮ್ಮ ಸಹಿತ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮತ್ತೊಬ್ಬ ಬಾಲಕ ಹಾಗೂ ಯುವಕನ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ. ಮಂಜುನಾಥ ಸಹಿತ ಇಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಗರಗ ಠಾಣೆಯಲ್ಲಿ ದಾಖಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT