ಬೆಂಗಳೂರು: ‘ಶಿಶುಗಳು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತಿರುವ ‘ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್’ (ಆರ್ಎಸ್ವಿ) ತಡೆಗೆ ರೋಗನಿರೋಧಕ ಲಸಿಕೆ ಒದಗಿಸಬೇಕು’ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಲಸಿಕೆಗೆ ಸಂಬಂಧಿಸಿದಂತೆ ಸನೋಫಿ ಮತ್ತು ಡಾ. ರೆಡ್ಡೀಸ್ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿದ್ದು, ಆರ್ಎಸ್ವಿ ತಡೆಗೆ ಒಂದು ಡೋಸ್ನ ಲಸಿಕೆಯನ್ನು ಪರಿಚಯಿಸಿವೆ.

ಈ ಲಸಿಕೆಯ ಬಗ್ಗೆ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವರಿಸಿದ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ನ ರಾಷ್ಟ್ರೀಯ ಅಧ್ಯಕ್ಷ ಡಾ. ವಸಂತ್ ಎಂ. ಖಲತ್ಕರ್, ‘ಮಕ್ಕಳಿಗೆ ಆಗಾಗ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಳೆ ಮತ್ತು ಚಳಿಗಾಲದಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತವೆ. ನವಜಾತ ಶಿಶು ಆಸ್ಪತ್ರೆಯಿಂದ ಮನೆಗೆ ತೆರಳುವಾಗಲೇ ಈ ಲಸಿಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನೀಡುವುದು ಉತ್ತಮ. ಇಲ್ಲವಾದಲ್ಲಿ, ನಂತರದ ಆಸ್ಪತ್ರೆ ಭೇಟಿ ವೇಳೆ ಒದಗಿಸಬೇಕು. ಈಗ ‘ನಿರ್ಸೆವಿಮಾಬ್’ ಎಂಬ ಒಂದೇ ಡೋಸ್ನ ಲಸಿಕೆಯಿದೆ. ಇದು ದೀರ್ಘಕಾಲ ಕಾರ್ಯನಿರ್ವಹಿಸುವ ಪ್ರತಿಕಾಯ ವೃದ್ಧಿಸಲಿದೆ’ ಎಂದರು.

ಡಾ.ರೆಡ್ಡೀಸ್ ಮೆಡಿಕಲ್ ಅಫೇರ್ಸ್ ಮುಖ್ಯಸ್ಥ ಭವೇಶ್ ಕೋಟಕ್, ‘ಆರ್ಎಸ್ವಿ ತಡೆಗೆ ದೇಶದಲ್ಲಿ ಎಲ್ಲ ನವಜಾತ ಶಿಶುಗಳು ಹಾಗೂ ಐದು ವರ್ಷದೊಳಗಿನ ಮಕ್ಕಳು ಲಸಿಕೆ ಪಡೆದುಕೊಳ್ಳುವಂತಾಗಬೇಕು. ನ್ಯುಮೋನಿಯಾದಂತಹ ಗಂಭೀರ ಸಮಸ್ಯೆಗಳಿಂದ ರಕ್ಷಿಸಲು ಈ ಲಸಿಕೆ ಸಹಕಾರಿ’ ಎಂದು ಹೇಳಿದರು.

ಸನೋಫಿಯ ಸಂಸ್ಥೆಯ ಸೀಸರ್ ಮಸ್ಕರೆನಾಸ್, ‘ವಿಶ್ವ ಆರೋಗ್ಯ ಸಂಸ್ಥೆಯು ಆರ್ಎಸ್ವಿಗೆ ಲಸಿಕೆಯನ್ನು ಶಿಫಾರಸು ಮಾಡಿದೆ. ಮಕ್ಕಳ ಆರೋಗ್ಯ ಕಾಪಾಡಲು ಈ ಲಸಿಕೆ ಸಹಕಾರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.