ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಅಧಿವೇಶನ | ಶಿಕ್ಷಕರ ಹೊರಗುತ್ತಿಗೆ: ಆದೇಶ ವಾಪಸ್‌ಗೆ ಆಗ್ರಹ

Published 12 ಡಿಸೆಂಬರ್ 2023, 15:53 IST
Last Updated 12 ಡಿಸೆಂಬರ್ 2023, 15:53 IST
ಅಕ್ಷರ ಗಾತ್ರ

ವಿಧಾನಸಭೆ: ಬಿಬಿಎಂಪಿಯ ಶಾಲೆಗಳಿಗೆ ಅಪ್ಪು ಡಿಟೆಕ್ಟಿವ್‌ ಏಜೆನ್ಸಿ ಎಂಬ ಸಂಸ್ಥೆಯಿಂದ 400 ಶಿಕ್ಷಕರ ಸೇವೆಯನ್ನು ಹೊರ ಗುತ್ತಿಗೆ ಆಧಾರದಲ್ಲಿ ಪಡೆಯಲು ನೀಡಿರುವ ಕಾರ್ಯಾದೇಶವನ್ನು ವಾಪಸ್‌ ಪಡೆಯಬೇಕು ಎಂದು ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಆಗ್ರಹಿಸಿದರು.

ಮಂಗಳವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಅಪ್ಪು ಡಿಟೆಕ್ಟಿವ್‌ ಆ್ಯಂಡ್ ಸೆಕ್ಯುರಿಟಿ ಏಜೆನ್ಸಿಗೆ ರಾಜರಾಜೇಶ್ವರಿನಗರ ಮತ್ತು ದಕ್ಷಿಣ ವಲಯದ ಶಾಲೆಗಳಿಗೆ  ಶಿಕ್ಷಕರ ಪೂರೈಕೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಕಾರ್ಯಾದೇಶ ನೀಡಿದ್ದಾರೆ. ಇದು ಯಾವ ಕಾಮಗಾರಿ’ ಎಂದು ಪ್ರಶ್ನಿಸಿದರು.

‘ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಗಿದಿದೆ. ಈಗ ಶಿಕ್ಷಕರ ಬದಲಾವಣೆ ಸರಿಯಲ್ಲ. ಸೆಕ್ಯೂರಿಟಿ ಏಜೆನ್ಸಿಯಿಂದ ಶಿಕ್ಷಕರ ಹೊರ ಗುತ್ತಿಗೆ ಸೇವೆ ಪಡೆಯುವುದೂ ಒಳ್ಳೆಯ ನಿರ್ಧಾರವಲ್ಲ. ಆದ್ದರಿಂದ ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT