ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ 2024–25ನೇ ಸಾಲಿನ ಪ್ರವೇಶ ಪ್ರಕ್ರಿಯೆ ವೇಳೆ ನಡೆದಿದ್ದ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಒಂಬತ್ತು ಮಧ್ಯವರ್ತಿಗಳು ಭಾಗಿಯಾಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕೆಲ ಸಿಬ್ಬಂದಿಯ ಸಹಕಾರ ಪಡೆದ ಮಧ್ಯವರ್ತಿಗಳು ವೈದ್ಯಕೀಯ ಕೋರ್ಸ್ ಪ್ರವೇಶದ ನಿರೀಕ್ಷೆಯಲಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸಿಇಟಿ ಸೀಟು ಹಂಚಿಕೆಯ ‘ಗೌಪ್ಯ ಕೀ’ ಪಡೆದು ವಂಚನೆ ಎಸಗಿದ್ದಾರೆ. ಕೆಲ ಪ್ರಕರಣಗಳಲ್ಲಿ ಸಿಇಟಿಯಲ್ಲಿ ಉನ್ನತ ಶ್ರೇಣಿ ಪಡೆದು ‘ನೀಟ್’ನಲ್ಲಿ ನಿರೀಕ್ಷೆಯಷ್ಟು ಅಂಕ ಬಾರದ ವಿದ್ಯಾರ್ಥಿಗಳಿಗೆ ಮಧ್ಯವರ್ತಿಗಳೇ ಹಣ ನೀಡಿ ಕೋಚಿಂಗ್ ಕೇಂದ್ರಗಳಿಗೆ ಮತ್ತೊಂದು ಅವಧಿ ನೀಟ್ ತರಬೇತಿಗಾಗಿ (ಲಾಂಗ್ ಟರ್ಮ್) ಕಳುಹಿಸಿದ್ದಾರೆ ಎಂಬ ಅಂಶಗಳನ್ನು ಪ್ರಕರಣದ ತನಿಖೆ ನಡೆಸಿದ ಮಲ್ಲೇಶ್ವರದ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಯ (ಸೈಬರ್) ಅಧಿಕಾರಿಗಳು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಮಧ್ಯವರ್ತಿಗಳು ಅಭ್ಯರ್ಥಿಗಳ ಲಾಗಿನ್, ಪಾಸ್ವರ್ಡ್, ಗೋಪ್ಯ ಕೀ ಅನ್ನು ಅನಧಿಕೃತವಾಗಿ ಪಡೆದುಕೊಂಡು ಅವರ ಪರವಾಗಿ ಆಯ್ಕೆ ನಮೂದಿಸಿದ್ದಾರೆ. ಕೆಲವು ಕಾಲೇಜುಗಳಿಗೆ ಲಾಭ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿವೆ ಎಂದು ಶಂಕಿಸಲಾದ ಕಾಲೇಜುಗಳಲ್ಲಿ ಬಹುಬೇಡಿಕೆಯ ಸೀಟುಗಳು ಖಾಲಿ ಉಳಿದಿರುವ ಕಾರಣ ಅಂತಹ ಕಾಲೇಜುಗಳ ಪಾತ್ರವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ದೃಢಪಡದ ವಿದ್ಯಾರ್ಥಿಗಳ ಪಾತ್ರ:

2024–25ನೇ ಸಾಲಿಗೆ ನಡೆದಿದ್ದ ಸಿಇಟಿಯಲ್ಲಿ ಉನ್ನತ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಕಾಲೇಜಿಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದಾರೆ ಎಂದು ದೂರಿದ್ದ ಕೆಇಎ ಅಂತಹ 2,348 ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿತ್ತು.

ನೋಟಿಸ್ಗೆ ವಿದ್ಯಾರ್ಥಿಗಳು ನೀಡಿದ ಉತ್ತರದ ಮೂಲಕ ಬಹುನೋಂದಣಿಯಾಗಿದ್ದ ಐ.ಪಿ ವಿಳಾಸಗಳನ್ನು ಗುರುತಿಸಲಾಗಿತ್ತು. ಸುಮಾರು 50 ಐ.ಪಿ ವಿಳಾಸದಿಂದ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಬಹುಬೇಡಿಕೆ ಇರುವ ಕೋರ್ಸ್ಗಳ ಸೀಟು ಪಡೆದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ಕೆಇಎ ನೀಡಿದ ನೋಟಿಸ್ಗೆ ಕೆಲವರಷ್ಟೇ ಉತ್ತರ ನೀಡಿದ್ದರು. 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತರ ನೀಡಿರಲಿಲ್ಲ. ಅವರಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು 2025–26ನೇ ಸಾಲಿನ ಸಿಇಟಿ ಬರೆದಿದ್ದರು. ಅವರ ಶ್ರೇಯಾಂಕವನ್ನು ಪರೀಕ್ಷಾ ಪ್ರಾಧಿಕಾರ ತಡೆಹಿಡಿದಿದೆ. ಆದರೆ, ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿರುವ ಕುರಿತು ಹೆಚ್ಚಿನ ಸಾಕ್ಷ್ಯಗಳು ಲಭಿಸಿಲ್ಲ. ಹಾಗಾಗಿ, ಯಾವ ವಿದ್ಯಾರ್ಥಿಯನ್ನೂ ಅಧಿಕೃತವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ತನಿಖಾ ವರದಿ ಹೇಳಿದೆ.

ಸೀಟು ಹಂಚಿಕೆಗೂ ಒಟಿಪಿ, ಮುಖಚಹರೆ

ಸಿಇಟಿ ಅರ್ಜಿ ಸಲ್ಲಿಕೆಗೆ ಒಟಿಪಿ ಕಡ್ಡಾಯ ಮಾಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ವಿವಿಧ ಕೋರ್ಸ್ಗಳ ಸೀಟು ಹಂಚಿಕೆಗೂ ಒಟಿಪಿ, ಮುಖಚಹರೆ ದೃಢೀಕರಣ ಬಳಸಿಕೊಳ್ಳುತ್ತಿದೆ.

‘ಹಿಂದಿನ ವರ್ಷಗಳಲ್ಲಿ ಸೀಟು ಹಂಚಿಕೆ ಮಾಡುವಾಗ ಗೌಪ್ಯ ಕೀ ಬಳಸಿಕೊಂಡು ಪ್ರಕ್ರಿಯೆ ನಡೆಸಲಾಗುತ್ತಿತ್ತು. ಕಚೇರಿಯ ಕೆಲ ಹೊರಗುತ್ತಿಗೆ ಸಿಬ್ಬಂದಿ ಮಧ್ಯವರ್ತಿಗಳಿಗೆ ಗೌಪ್ಯ ಕೀ ಸೋರಿಕೆ ಮಾಡಿರುವುದು ಪತ್ತೆಯಾದ ನಂತರ ಒಟಿಪಿ, ಮುಖಚಹರೆ ದೃಢೀಕರಣದ ವಿಧಾನ ಅಳವಡಿಸಿಕೊಂಡಿದ್ದೇವೆ. ಎರಡೂ ಅಂಶಗಳ ಆಧಾರದಲ್ಲಿ ಸೀಟು ಹಂಚಿಕೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು’ ಎಂದು ಕೆಇಎ
ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದರು.

ಸಿಇಟಿಗೆ ಅರ್ಜಿ ಸಲ್ಲಿಸುವಾಗ ನಮೂದಿಸಿದ್ದ ಮೊಬೈಲ್ ನಂಬರ್ ಬಳಸಿಕೊಂಡು ಆಯಾ ವಿದ್ಯಾರ್ಥಿಗಳ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಬದಲಾವಣೆ ಮಾಡಲು ವಿದ್ಯಾರ್ಥಿಗಳು ಲಿಖಿತವಾಗಿ ಮನವಿ ಸಲ್ಲಿಸಿ, ಬದಲಾವಣೆ ಮಾಡಿಕೊಳ್ಳಬಹುದು ಎಂದರು.

ಬ್ಲಾಕಿಂಗ್ ಏಕೆ?

ರಾಜ್ಯ ಸರ್ಕಾರ ಮತ್ತು ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘದ ನಡುವಿನ ಒಮ್ಮತದ ಒಪ್ಪಂದದ ಪ್ರಕಾರ, ಸಿಇಟಿ ಮೂಲಕ ಎಲ್ಲ ಸುತ್ತಿನ ಹಂಚಿಕೆಯ ನಂತರ ಉಳಿದ ಸೀಟುಗಳು ಹಾಗೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ನಂತರ ಪ್ರವೇಶ ಪಡೆಯದ ಸೀಟುಗಳನ್ನು ಆಡಳಿತ ಮಂಡಳಿ ಕೋಟಾದ ಮೂಲಕ ಭರ್ತಿ ಮಾಡಿಕೊಳ್ಳಬಹುದು. ಇದು ಸಿಟ್ ಬ್ಲಾಕಿಂಗ್ ದಂದೆಯ ಮೂಲ. ವೈದ್ಯಕೀಯ ಕೋರ್ಸ್ ಆಕಾಂಕ್ಷಿಯಾಗಿರುವ, ಸಿಇಟಿಯಲ್ಲಿ ಉನ್ನತ ಶ್ರೇಣಿಯಲ್ಲಿರುವ ವಿದ್ಯಾರ್ಥಿಗಳು ಎಂಜನಿಯರಿಂಗ್ ಸೀಟು ಹಂಚಿಕೆಯಲ್ಲಿ ಭಾಗವಹಿಸುವಂತೆ ಮಾಡಿ, ಕೊನೆಯ ಸುತ್ತಿನವರೆಗೂ ಪ್ರವೇಶ ಪಡೆಯದೇ ಸೀಟು ಕಾಯ್ದಿರಿ ಸಲಾಗುತ್ತದೆ. ಹೀಗೆ ಬೇಡಿಕೆ ಇರುವ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಸೈನ್ಸ್ ಮೊದಲಾದ ಕೋರ್ಸ್ಗಳಿಗೆ ಆಡಳಿತ ಮಂಡಳಿಗಳು ಒಂದು ಸೀಟಿಗೆ ₹60 ಲಕ್ಷದವರೆಗೂ ಸೀಟು ಮಾರಾಟ ಮಾಡಿಕೊಳ್ಳುತ್ತವೆ.

ಸೀಟ್ ಬ್ಲಾಕಿಂಗ್ ತಡೆಗೆ ಕ್ರಮಗಳು

ಸಿಇಟಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ‘ಆಧಾರ್’ ದೃಢೀಕರಣ

ಒಂದು ಮೊಬೈಲ್ ಸಂಖ್ಯೆಯಿಂದ ಒಂದು ಅರ್ಜಿ ಮಾತ್ರ ಸಲ್ಲಿಕೆಗೆ ಅವಕಾಶ

ಒಟಿಪಿ ನಮೂದು, ಮುಖಚಹರೆ ದಾಖಲಿಸುವುದು ಕಡ್ಡಾಯ

ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ

ಚಾಯ್ಸ್ 4 ನಮೂದಿಸಿದರೂ ಮುಂದಿನ ಸುತ್ತಿಗೆ ಅವಕಾಶ (ದಂಡಸಹಿತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.