ಖರ್ಗೆ ಅವರ ಇಡೀ ಕುಟುಂಬ ಅಸ್ಸಾಂಗೆ ಅವಮಾನ ಮಾಡುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ನಮ್ಮ ಜನರಿಗೆ ಅವಮಾನ ಮಾಡಿದ್ದಾರೆ. ಅಸ್ಸಾಂನ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ಬಂದಿದ್ದಾಗ ಮಲ್ಲಿಕಾರ್ಜುನ ಖರ್ಗೆ ಬಹಳ ತುಚ್ಛವಾಗಿ ಮಾತನಾಡಿದ್ದರು. ಈಗ ಅವರ ಮಗ ಪ್ರಿಯಾಂಕ್ ಖರ್ಗೆ ಅಸ್ಸಾಂ ಯುವಜನರಲ್ಲಿ ಪ್ರತಿಭೆಯೇ ಇಲ್ಲ ಎಂದಿದ್ದಾರೆ. ಅಸ್ಸಾಂನ ಸಂಸ್ಕೃತಿ ಮತ್ತು ಪ್ರತಿಭೆ ಬಗ್ಗೆ ಈ ಇಬ್ಬರಿಗೂ ಕಾಂಗ್ರೆಸ್ ತಿಳುವಳಿಕೆ ಹೇಳಬೇಕು.
-ಹಿಮಂತ ಬಿಸ್ವ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
ಅಸ್ಸಾಂನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಆಗಿಲ್ಲ. ಆಡಳಿತದ ಹೆಸರಿನಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ನಡೆದಿರಬಹುದಾದ ಎಲ್ಲ ಭ್ರಷ್ಟಾಚಾರಗಳ ಮೂಲ ಕೆದಕುತ್ತಾ ಹೋದರೆ ಅವು ಹಿಮಂತ ಅವರ ಮನೆ ಬಾಗಿಲಿಗೆ ಹೋಗಿ ನಿಲ್ಲುತ್ತವೆ. ಅಲ್ಲಿನ ಯುವಜನರು ಅಸ್ಸಾಂ ತೊರೆದು ಬೆಂಗಳೂರಿಗೇಕೆ ಬರುತ್ತಿದ್ದಾರೆ? ಆ ಯುವಜನರಿಗಾಗಿ ತಾನು ಏನು ಮಾಡಿದ್ದೇನೆ ಎಂದು ಹಿಮಂತ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ.