ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪುತ್ತಿಗೆ ಪರ್ಯಾಯ ಶೋಭಾಯಾತ್ರೆಗೆ ಸಪ್ತ ಮಠಾಧೀಶರು ಗೈರು

Published 18 ಜನವರಿ 2024, 3:10 IST
Last Updated 18 ಜನವರಿ 2024, 3:10 IST
ಅಕ್ಷರ ಗಾತ್ರ

ಉಡುಪಿ: ಪರ್ಯಾಯದ ಅಂಗವಾಗಿ ನಡೆದ ಪುತ್ತಿಗೆ ಮಠದ ಶ್ರೀಗಳ ಶೋಭಾಯಾತ್ರೆಯಲ್ಲಿ ಸಪ್ತ ಮಠಗಳ ಮಠಾಧೀಶರು ಪಾಲ್ಗೊಂಡಿರಲಿಲ್ಲ.

ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿ ಅಲ್ಲಿಂದ ಕೃಷ್ಣ ಮಠದವರೆಗೆ ನಡೆಯುವ ಶೋಭಾಯಾತ್ರೆಯಲ್ಲಿ ಉಡುಪಿಯ ಕೃಷ್ಣಮಠಕ್ಕೆ ಸಂಬಂಧಿಸಿದ ಎಲ್ಲ ಅಷ್ಟ ಮಠಗಳ ಮಠಾಧೀಶರು ಪಾಲ್ಗೊಳ್ಳುವುದು ವಾಡಿಕೆ. ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಅವರನ್ನು ಶೋಭಾಯಾತ್ರೆಯಲ್ಲಿ ಕರೆತರುವುದು ಸಂಪ್ರದಾಯ. ಆದರೆ, ಯಾತ್ರೆಯಲ್ಲಿ ಪುತ್ತಿಗೆ ಶ್ರೀ ಮತ್ತು ಅವರ ಕಿರಿಯ ಶ್ರೀ ಮಾತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT