ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಪೂರೈಕೆ ಯೋಜನೆ

ಸರ್ಕಾರದಿಂದ ಮೂರ್ಖ ಕೆಲಸ: ಸಾಹಿತಿಗಳ ಆಕ್ರೋಶ
Last Updated 24 ಜೂನ್ 2019, 18:56 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸರ್ಕಾರ ದಶಕಗಳಿಂದಶರಾವತಿ ನದಿಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಇದೀಗ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಸರ್ಕಾರದ ಯೋಜನೆ ಅತ್ಯಂತ ಮೂರ್ಖತನದ್ದು’ ಎಂದು ಸಾಹಿತಿ ನಾ.ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಹಿಂದೆ ಶರಾವತಿ ಮುಳುಗಡೆ ಸಂತ್ರಸ್ತರನ್ನು ಲಾರಿಯಲ್ಲಿ ತುಂಬಿಕೊಂಡು ಕಾಡಿನಲ್ಲಿ ಬಿಟ್ಟಿದ್ದರು. ಆ ಸಂತ್ರಸ್ತರು ಇಂದಿಗೂ ಅನಾಥರಂತೆ ಜೀವಿಸುತ್ತಿದ್ದಾರೆ. ಇದೀಗ ಸರ್ಕಾರ ಇಡೀ ಮಲೆನಾಡಿನ ಜನರನ್ನೇ ಸಂತ್ರಸ್ತರನ್ನಾಗಿ ಮಾಡಲು ಹೊರಟಿದೆ. ಶರಾವತಿ ನದಿ ಇರುವ ಸಾಗರ ತಾಲ್ಲೂಕು ಒಂದರಲ್ಲೇ 133 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ದುಃಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವುದು ಮೂರ್ಖತನದ ಪರಮಾವಧಿ. ಈ ಯೋಜನೆಯಿಂದ ಸಹಸ್ರಾರು ಜನ ನಿರಾಶ್ರಿತರಾಗುತ್ತಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಸಾಹಿತಿ ಶ್ರೀಕಂಠ ಕೂಡಿಗೆ ಮಾತನಾಡಿ, ‘ಈ ಯೋಜನೆಯ ಹಿಂದೆ ರಾಜಕೀಯ ಉದ್ದೇಶವಿದೆ. ಲಿಂಗನಮಕ್ಕಿ ನೀರು ತುಮಕೂರು ಮಾರ್ಗವಾಗಿ ಸಾಗುವುದರಿಂದ ತುಮಕೂರಿಗೆ ನೀರು ಪೂರೈಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿರಬಹುದು. ಆದರೆ, ಇದೊಂದು ಅವೈಜ್ಞಾನಿಕವಾದ, ತರ್ಕಹೀನ, ಉದ್ದೇಶಪೂರ್ವಕ ಯೋಜನೆಯಾಗಿದ್ದು, ಇದನ್ನು ಹಿಂಪಡೆಯಲೇಬೇಕು’ ಎಂದು ಆಗ್ರಹಿಸಿದರು.

ಇಂಧನ ತಜ್ಞ ಶಂಕರ್ ಶರ್ಮ, ‘ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯ ಪ್ರಕಾರ ಬೆಂಗಳೂರಿನಲ್ಲಿ 15 ಟಿಎಂಸಿ ಮಳೆ ಬೀಳುತ್ತಿದೆ. ಇದನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗದ ಸರ್ಕಾರ ಲಿಂಗನಮಕ್ಕಿಯಿಂದ 10 ಟಿಎಂಸಿ ಅಡಿ ನೀರು ತೆಗೆದುಕೊಂಡು ಹೋಗುತ್ತಿರುವುದು ಅತ್ಯಂತ ಅವೈಜ್ಞಾನಿಕ.400 ಕಿ.ಮೀ ಉದ್ದ, 1,300 ಅಡಿ ಎತ್ತರದಲ್ಲಿ ವರ್ಷಕ್ಕೆ 30 ಟಿಎಂಸಿ ಅಡಿ ನೀರು ಕೊಂಡೊಯ್ಯಲು 720 ಕೋಟಿ ಯೂನಿಟ್ ವಿದ್ಯುತ್ ನಷ್ಟವಾಗುತ್ತದೆ. ಹೀಗಾಗಿ ಸರ್ಕಾರ ಇಂತಹ ಮೂರ್ಖ ನಿರ್ಧಾರವನ್ನು ಕೈಬಿಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT