ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ

Last Updated 21 ಜೂನ್ 2018, 17:49 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಗುರುವಾರ ಬೆಳಗಿನ ಜಾವ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಚಿಕಿತ್ಸೆ ಪಡೆದು ರಾತ್ರಿ ಮಠಕ್ಕೆ ವಾಪಾಸ್‌ ಆದರು.

‘ಪಿತ್ತಕೋಶಕ್ಕೆ ಸ್ಟೆಂಟ್ ಅಳವಡಿಸಿ ಆರು ತಿಂಗಳಾಗಿದ್ದು, ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ತಪಾಸಣೆಗಾಗಿ ಕರೆತರಲಾಗಿತ್ತು. ಕಳೆದ ಬಾರಿ ಅಳವಡಿಸಿದ್ದ ಸ್ಟೆಂಟ್ ಬ್ಲಾಕ್‌ ಆಗಿತ್ತು. ಅದನ್ನು ತೆರವು ಮಾಡಿದ್ದೇವೆ. ಇದು ತಾತ್ಕಾಲಿಕ ಮಾತ್ರ. ಮತ್ತೆ ಬ್ಲಾಕ್‌ ಆಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

‘ಒಂದು ಸ್ಟೆಂಟ್‌ನ ಅವಧಿ ಕೇವಲ ಆರು ತಿಂಗಳು. ಈಗಾಗಲೇ ಅವರಿಗೆ 8 ಸ್ಟೆಂಟ್‌ಗಳನ್ನು ಅಳವಡಿಸಲಾಗಿದ್ದು, ಹೊಸದಾಗಿ ಸ್ಟೆಂಟ್ ಅಳವಡಿಕೆ ಕಷ್ಟ. ಆಗಾಗ ಬ್ಲಾಕ್‌ ತೆರುವುಗೊಳಿಸುತ್ತಿರಬೇಕು. ಸದ್ಯಪಿತ್ತನಾಳದ ಸೋಂಕು ಕಡಿಮೆಯಾಗಿದ್ದು, ರಕ್ತದೊತ್ತಡ ಸಾಮಾನ್ಯ ಸ್ಥಿತಿಯಲ್ಲಿದೆ’ ಎಂದರು.

ಡಾ. ರವೀಂದ್ರ, ಡಾ. ವೆಂಕಟರಮಣನ್ ಅವರ ನೇತೃತ್ವದಲ್ಲಿ 10ಕ್ಕೂ ಹೆಚ್ಚು ನುರಿತ ವೈದ್ಯರು ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ, ಬ್ಲಾಕ್‌ ಸರಿಪಡಿಸಿದ್ದಾರೆ.

* ಶ್ರೀಗಳು ಆರೋಗ್ಯವಾಗಿದ್ದಾರೆ. ಭಕ್ತರು ಆಸ್ಪತ್ರೆ ಬಳಿ ಬರುವುದು ಬೇಡ. ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ

–ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT