ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡುಭ್ರಷ್ಟತೆ ಹೊಸ ಇತಿಹಾಸ ಬರೆಯುತ್ತಿರುವ ಸಿದ್ದರಾಮಯ್ಯ: ವಿಜಯೇಂದ್ರ ವಾಗ್ದಾಳಿ

Published 2 ಫೆಬ್ರುವರಿ 2024, 11:53 IST
Last Updated 2 ಫೆಬ್ರುವರಿ 2024, 11:53 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಶೇ 40 ಕ್ಕೂ ಹೆಚ್ಚು ಲಂಚ ಪಡೆಯುತ್ತಿರುವುದನ್ನು ಕಾಂಗ್ರೆಸ್‌ ಮುಖಂಡ ಬಿ.ಶಿವರಾಂ ಅವರೇ ಆರೋಪ ಮಾಡಿದ್ದಾರೆ. ಸರ್ಕಾರದ ವಿರುದ್ಧ ಅವರ ಪಕ್ಷದ ನಾಯಕರೇ ರೋಸಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು, ಕಾಂಗ್ರೆಸ್‌ ಸರ್ಕಾರದ ಬ್ರಹ್ಮಾಂಡದ ಬಗ್ಗೆ ಭ್ರಷ್ಟಾಚಾರ ಅವರದೇ ಪಕ್ಷದ ನಾಯಕರೇ ಸುದ್ದಿಗೋಷ್ಠಿ ಮೂಲಕ ಬಯಲು ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯಲು ಹೊರಟಿದೆ ಎಂದಿದ್ದಾರೆ.

ಅಭಿವೃದ್ಧಿ, ಜನಕಲ್ಯಾಣ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿರುವ ಕಾಂಗ್ರೆಸ್‌ ಸರ್ಕಾರ ಎಲ್ಲೆಂದರಲ್ಲಿ ಭ್ರಷ್ಟಾಚಾರದ ಅಂಗಡಿಗಳನ್ನು ತೆರೆಯುವುದ ಜತೆಗೆ ಹೆಜ್ಜೆ ಹೆಜ್ಜೆಗೂ ಎಟಿಎಂ ಮಾದರಿ ಕಮಿಷನ್‌ ಕೌಂಟರ್‌ಗಳನ್ನೂ ತೆರೆದು ಕುಳಿತಿದೆ. ಈ ಸರ್ಕಾರವನ್ನು ಕಿತ್ತೊಗೆಯುವುದೊಂದೇ ಜನರಿಗಿರುವ ಮಾರ್ಗ ಎಂದು ವಿಜಯೇಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT