ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | Cricket: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾ ಸವಾಲು

Published 4 ಅಕ್ಟೋಬರ್ 2023, 11:41 IST
Last Updated 4 ಅಕ್ಟೋಬರ್ 2023, 11:41 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್ ಕ್ರೀಡಾಕೂಟದ ಟಿ20 ಕ್ರಿಕೆಟ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಸೆಮಿಫೈನಲ್ ಪಂದ್ಯವು ಅಕ್ಟೋಬರ್ 6ರಂದು (ಶುಕ್ರವಾರ) ನಿಗದಿಯಾಗಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 6.30ಕ್ಕೆ ಆರಂಭವಾಗಲಿದೆ.

ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಋತುರಾಜ್ ಗಾಯಕವಾಡ್ ನೇತೃತ್ವದ ಭಾರತ ತಂಡವು 23 ರನ್‌ಗಳಿಂದ ನೇಪಾಳ ಎದುರು ಜಯ ಗಳಿಸಿತ್ತು. ಭಾರತದ ಪರ ಯಶಸ್ವಿ ಜೈಸ್ವಾಲ್ ಚೊಚ್ಚಲ ಶತಕ ಗಳಿಸಿದರು.

ಬಾಂಗ್ಲಾದೇಶಕ್ಕೆ ರೋಚಕ ಗೆಲುವು...

ಇಂದು ನಡೆದ ನಾಲ್ಕನೇ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಬಾಂಗ್ಲಾದೇಶವು ಮಲೇಷ್ಯಾ ವಿರುದ್ಧ ಎರಡು ರನ್ ಅಂತರದ ರೋಚಕ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ, 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 116 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ನಾಯಕ ಸೈಫ್ ಹಸನ್ 50 ರನ್ ಗಳಿಸಿ ಔಟಾಗದೆ ಉಳಿದರು. ಗುರಿ ಬೆನ್ನಟ್ಟಿದ ಮಲೇಷ್ಯಾ ಎಂಟು ವಿಕೆಟ್ ನಷ್ಟಕ್ಕೆ 114 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಇದರೊಂದಿಗೆ ಮಲೇಷ್ಯಾ ಬ್ಯಾಟರ್ ವೀರಣ್‌ದೀಪ್ ಸಿಂಗ್ (52) ಹೋರಾಟವು ವ್ಯರ್ಥವೆನಿಸಿತು. ಬಾಂಗ್ಲಾ ಪರ ರಿಪೊನ್ ಮೊಂಡಲ್ ಮತ್ತು ಅಫಿಫ್ ಹೊಸೈನ್ ತಲಾ ಮೂರು ವಿಕೆಟ್ ಗಳಿಸಿದರು.

ಲಂಕಾ ಹೊರದಬ್ಬಿದ ಅಫ್ಗಾನ್...

ಮೂರನೇ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಎಂಟು ರನ್‌ಗಳ ರೋಚಕ ಜಯ ಗಳಿಸಿದ ಅಫ್ಗಾನಿಸ್ತಾನ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನ್ ನೂರ್ ಅಲಿ ಜದ್ರಾನ್ ಅರ್ಧಶತಕದ (51) ಹೊರತಾಗಿಯೂ 18.3 ಓವರ್‌ಗಳಲ್ಲಿ 116 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಅಫ್ಗಾನ್ ನಾಯಕ ಗುಲ್ಬದಿನ್ ನೈಬ್ (28ಕ್ಕೆ 3) ಹಾಗೂ ಕೈಸ್ ಅಹ್ಮದ್ ದಾಳಿಗೆ (16ಕ್ಕೆ 3) ತತ್ತರಿಸಿದ ಲಂಕಾ 19.1 ಓವರ್‌ಗಳಲ್ಲಿ 108 ರನ್ನಿಗೆ ಆಲೌಟ್ ಆಯಿತು.

ಮಗದೊಂದು ಸೆಮಿಪೈನಲ್‌ನಲ್ಲಿ ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT