ಬೆಂಗಳೂರು: ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–0 ಯಿಂದ ಬಿಯುಎಫ್‌ಸಿ ವಿರುದ್ಧ ಜಯ ಸಾಧಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಎಂಇಜಿ ಪರವಾಗಿ ಆಯುಷ್ (43ನೇ ನಿ), ಶರತ್ ನಾರಾಯಣನ್ (86ನೇ), ಶೇಖ್ ಮುಜೀಬ್ (86ನೇ) ತಲಾ ಒಂದು ಗೋಲು ಗಳಿಸಿದರು.
ಮತ್ತೊಂದು ಪಂದ್ಯದಲ್ಲಿ ರೂಟ್ಸ್ ಎಫ್‌ಸಿ ತಂಡವು 1–0 ಯಿಂದ ಎಚ್‌ಎಎಲ್ ಎಫ್‌ಸಿ ತಂಡವನ್ನು ಮಣಿಸಿತು. ರೂಟ್ಸ್ ಪರ ಆರ್. ವಿಶಾಲ್ (46ನೇ) ಚೆಂಡನ್ನು ಗುರಿ ಸೇರಿಸಿದರು.