ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಾನನ ಶರ್ಮಾಗೆ ಗಳಗನಾಥ, ಪೋತೆಗೆ ರಾಜಪುರೋಹಿತ ಪ್ರಶಸ್ತಿ

Last Updated 30 ಡಿಸೆಂಬರ್ 2022, 12:30 IST
ಅಕ್ಷರ ಗಾತ್ರ

ಕಲಬುರಗಿ: ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನವು 2022ನೇ ಸಾಲಿನ ಗಳಗನಾಥ ಪ್ರಶಸ್ತಿಯನ್ನು ಸಾಹಿತಿ, ನಾಟಕಕಾರ ಗಜಾನನ ಶರ್ಮಾ ಹಾಗೂ ನಾ.ಶ್ರೀ. ರಾಜಪುರೋಹಿತ ಪ್ರಶಸ್ತಿಯನ್ನು ಸಾಹಿತಿ, ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಅವರಿಗೆ ಘೋಷಿಸಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ, ‘ಪ್ರತಿಷ್ಠಾನ ಆರಂಭವಾದಾಗಿನಿಂದ ಇಬ್ಬರೂ ಗಣ್ಯರ ಹೆಸರಿನಲ್ಲಿ ತಲಾ ಐವರು ಸೇರಿದಂತೆ ಹತ್ತು ಜನರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಇದೇ 31ರಂದು ಬೆಳಿಗ್ಗೆ 11ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

‘ಗಳಗನಾಥರು 24 ಕಾದಂಬರಿಗಳನ್ನು ಬರೆದು ಆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಅವರಂತೆ ಕಾದಂಬರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗಜಾನನ ಶರ್ಮಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತಿಹಾಸ ಸಂಶೋಧನೆಯಲ್ಲಿ ಹೆಸರು ಮಾಡಿದ ನಾ.ಶ್ರೀ. ರಾಜಪುರೋಹಿತ ಹೆಸರಿನ ಪ್ರಶಸ್ತಿಯನ್ನು ಸಂಶೋಧನೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಎಚ್.ಟಿ. ಪೋತೆ ಅವರಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಸಮ್ಮೇಳನದಲ್ಲಿಲ್ಲ ಆದ್ಯತೆ: ಜನವರಿ 6ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾವೇರಿಯವರೇ ಆದ ಗಳಗನಾಥರು ಹಾಗೂ ರಾಜಪುರೋಹಿತ ಅವರ ಹೆಸರಿನಲ್ಲಿ ಗೋಷ್ಠಿ ನಡೆಸುವಂತೆ ಅಥವಾ ಯಾವುದಾದರೂ ವೇದಿಕೆ, ದ್ವಾರಕ್ಕೆ ಹೆಸರು ಇಡುವಂತೆ ಮನವಿ ಮಾಡಿಕೊಂಡಿದ್ದೆವು. ಈ ಬಗ್ಗೆ ಪ್ರತಿಷ್ಠಾನದಿಂದಲೂ ಪತ್ರ ಬರೆಯಲಾಗಿತ್ತು. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆಗಳಿಗೆಯಲ್ಲಿ ಕೈಬಿಟ್ಟಿದ್ದಾರೆ. ಇದರಿಂದ ನಿರಾಸೆಯಾಗಿದೆ ಎಂದು ಪ್ರೊ. ದುಷ್ಯಂತ ನಾಡಗೌಡ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT