ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಕ್ತಿಗೆ ಬೆಂಬಲ, ಪಕ್ಷಕ್ಕಿಲ್ಲ’: ಎಸ್‌.ಟಿ.ಸೋಮಶೇಖರ್‌

Published 2 ಫೆಬ್ರುವರಿ 2024, 16:26 IST
Last Updated 2 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

ಕೆಂಗೇರಿ: ‘ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಬೆಳವಣಿಗೆಗೆ ಸಹಕಾರ ನೀಡುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಯಾವುದೇ ಪಕ್ಷ ಬೆಂಬಲಿಸುವುದಿಲ್ಲ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

ಕೆಂಗೇರಿ ಉಪನಗರದಲ್ಲಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಳೆದ ಚುನಾವಣೆ ವೇಳೆ ಪಕ್ಷದಿಂದ ಅಮಾನತುಗೊಂಡಿದ್ದ ಯಶವಂತಪುರ ಕ್ಷೇತ್ರದ ಸ್ಥಳೀಯ ನಾಯಕ ಮಾರೇಗೌಡರ ಪಕ್ಷ ಸೇರ್ಪಡೆಯಿಂದ ಯಾವುದೇ ಮುಜುಗರವಾಗಿಲ್ಲ. 2028ರವರೆಗೆ ಕೇವಲ ಅಭಿವೃದ್ಧಿಗಷ್ಟೇ ಗಮನಹರಿಸಲಾಗುವುದು. ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಆಡಳಿತ ಪಕ್ಷದ ಸದಸ್ಯರು ಬಜೆಟ್‌ ಅನ್ನು ವಿಶೇಷ ಎಂದು ಬಣ್ಣಿಸುತ್ತಾರೆ. ವಿರೋಧ ಪಕ್ಷಗಳು ನೀರಸವೆಂದು ಟೀಕಿಸುತ್ತಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದರು.

ಮುಖಂಡರಾದ ಜಿ.ವಿ.ಸುರೇಶ್, ಕೆ.ಆರ್.ಮೂರ್ತಿ, ಕೆ.ವೈ.ಕೃಷ್ಣ, ಹರೀಶ್, ಕದಿರಪ್ಪ, ಮಹೇಂದ್ರ ಕಿರಣ್, ಟಿ.ಪ್ರಭಾಕರ್, ಹನುಮಂತರಾಜು, ಅಮಾನುಲ್ಲಾ, ಕೆ.ಸಿ.ಸತೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT