ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದಲ್ಲಿ ಈ ವರ್ಷ ₹1 ಲಕ್ಷ ಕೋಟಿಗೂ ಅಧಿಕ ಸಕ್ಕರೆ ವಹಿವಾಟು: ಸಚಿವ ಶಿವಾನಂದ

Published 3 ಸೆಪ್ಟೆಂಬರ್ 2024, 11:33 IST
Last Updated 3 ಸೆಪ್ಟೆಂಬರ್ 2024, 11:33 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿ ಈ ವರ್ಷ ₹1 ಲಕ್ಷ ಕೋಟಿಗೂ ಅಧಿಕ ಸಕ್ಕರೆ ವಹಿವಾಟು ನಡೆದಿದೆ. ಇದರಲ್ಲಿ ಸಿಂಹಪಾಲು; ಅಂದರೆ ಕರ್ನಾಟಕದಿಂದಲೇ ₹21 ಸಾವಿರ ಕೋಟಿ ವಹಿವಾಟು ಮಾಡಲಾಗಿದೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

‘ಸಹಕಾರ ಹಾಗೂ ಖಾಸಗಿ ವಲಯ ಸೇರಿ ರಾಜ್ಯದಲ್ಲಿ 76 ಸಕ್ಕರೆ ಕಾರ್ಖಾನೆಗಳು ಚಾಲ್ತಿಯಲ್ಲಿವೆ. ಒಂದೇ ವರ್ಷದಲ್ಲಿ ಕಬ್ಬು ಕಳಿಸಿದ ರೈತರಿಗೆ ₹20 ಸಾವಿರ ಕೋಟಿಗೂ ಅಧಿಕ ಬಿಲ್‌ ನೀಡಲಾಗಿದೆ. ಶೇ 99ರಷ್ಟು ಬಿಲ್‌ ಪಾವತಿಯಾಗಿದ್ದು, ಕೆಲವರದ್ದು ಮಾತ್ರ ತಾಂತ್ರಿಕ ಕಾರಣ ಬಾಕಿ ಉಳಿದಿದೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೆಳಗಾವಿಯಲ್ಲಿರುವ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಪ್ರತಿ ಕಾರ್ಖಾನೆಯೂ ಪ್ರತಿ ಟನ್‌ ಸಕ್ಕೆರೆಗೆ ₹1 ಪಾವತಿಸುತ್ತದೆ. ಹೀಗೆ ಪಾವತಿಯಾದ ಮೊತ್ತವೇ ₹8 ಕೋಟಿ ಆಗಿದೆ’ ಎಂದರು.

‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಸಂಬಂಧ ಕೂಡಲಸಂಗಮದ ಸ್ವಾಮೀಜಿ ಹಲವು ಬಾರಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ. ಸಮಯ ಬಂದಾಗ ಸಿ.ಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವರಿಷ್ಠರು ಒಪ್ಪಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಆರ್.ವಿ.ದೇಶಪಾಂಡೆ ಹೇಳಿದ್ದು ವೈಯಕ್ತಿಕ ವಿಚಾರ. ಅವರು ಹಿರಿಯ ಶಾಸಕ. ಮುಖ್ಯಮಂತ್ರಿ ಸ್ಥಾನ ಬಯಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಸದ್ಯ ಅ ಕುರ್ಚಿ ಖಾಲಿ ಇಲ್ಲ’ ಎಂದೂ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT