ಹಿಂದೆ 45 ಸೆಕೆಂಡ್‌ಗೆ ಒಂದು ಸ್ಟ್ರಾ ತಯಾರಿಕೆ ಸಾಧ್ಯವಾಗುತ್ತಿತ್ತು. ಈಗ ಒಂದು ನಿಮಿಷದಲ್ಲಿಯೇ 60 ಸ್ಟ್ರಾ ತಯಾರಿಸಲಾಗುತ್ತಿದೆ.
– ಸಾಜಿ ವರ್ಗೀಸ್, ಮುಖ್ಯಸ್ಥ ‘ಸನ್‌ಬರ್ಡ್’
ರಾಸಾಯನಿಕ ಮುಕ್ತ ಪ್ರಕ್ರಿಯೆಯಲ್ಲಿ ತಯಾರಿಸಲಾಗುತ್ತಿದೆ. ನಾಲ್ಕು ಘಟಕಗಳಲ್ಲಿ ಒಟ್ಟು 86 ಮಹಿಳೆಯರಿಗೆ ಕೆಲಸ ನೀಡಿದ್ದೇವೆ.
– ಚಿರಾಗ್ , ಸಹ ಸಂಸ್ಥಾಪಕ
ರೈತರ ತೋಟಗಳಿಂದ ಗರಿ ಖರೀದಿ
‘ಮಂಡ್ಯ ತುಮಕೂರು ಹಾಸನ ಜಿಲ್ಲೆಗಳ ರೈತರಿಂದ ತೆಂಗಿನಗರಿಗಳನ್ನು ಖರೀದಿಸುತ್ತೇವೆ. ಒಂದು ಗರಿಯಿಂದ 200ರ ವರೆಗೆ ಸ್ಟ್ರಾ ತಯಾರಿಸಬಹುದು. ಅದು ಆರು ತಿಂಗಳ ಬಾಳಿಕೆ ಬರುತ್ತದೆ. ಬಳಸಿದ ಮೇಲೆ ಪರಿಸರಕ್ಕೂ ಹಾನಿ ಇಲ್ಲ’ ಎಂದು ಚಿರಾಗ್ ಹೇಳಿದರು.