ಕಾಸರಗೋಡು: ಸೂರ್ಯನ ತಾಪದಿಂದಾಗಿ ತಾಯನ್ನೂರು ಗ್ರಾಮದ ತೇರಂಕಲ್ಲು ಸುಧಾಕರ ಅವರ ಪತ್ನಿ ಶಾಂತಾ (53) ಮೃತಪಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ ಮನೆಯ ಸಮೀಪದ ಹಿತ್ತಿಲಿನಿಂದ ದನಗಳಿಗೆ ಹುಲ್ಲು ಕೊಯ್ಯುವ ವೇಳೆ ಆವರಿಗೆ ಉರಿಬಿಸಿಲಿನಿಂದ ಸೂರ್ಯಾಘಾತವಾಗಿತ್ತು. ಕೂಡಲೇ ಮನೆಗೆ ಬಂದರೂ ಜಗಲಿಯಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಎಣ್ಣಪಾರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿ ಇದ್ದುದರಿಂದ ಅವರನ್ನು ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೂ ಜೀವ ಉಳಿಯಲಿಲ್ಲ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅವರು ಸೂರ್ಯಾಘಾತಕ್ಕೆ (ಸನ್ಸ್ಟ್ರೋಕ್) ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದಾರೆ.

ಬಿಸಿಲಿನ ಝಳಕ್ಕೆ ಜಿಲ್ಲೆಯಲ್ಲಿ ಈಗಾಗಲೇ ಎಂಟು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಉರಿಬಿಸಿಲು ದಿನದಿಂದ ದಿನಕ್ಕೆ ಏರತೊಡಗಿದೆ. ಭಾನುವಾರ ಕುಂಬಳೆ ಬಳಿಯ ನಾಯ್ಕಾಪಿನಲ್ಲಿ ಇಬ್ಬರು ಮಕ್ಕಳಿಗೆ ಸೂರ್ಯಾಘಾತವಾಗಿದೆ.

ಸವಿತಾ ಅವರ ಮಕ್ಕಳಾದ ಶೈಲೇಶ್ (8), ಆರತಿ (5) ಗಾಯಗೊಂಡವರು. ಮಧ್ಯಾಹ್ನ ನಡೆದುಕೊಂಡು ಹೋಗುತ್ತಿದ್ದಾಗ ಅವರ ಕೈಗಳಿಗೆ ಸುಟ್ಟಗಾಯಗಳಾಗಿದ್ದವು. ಇಬ್ಬರನ್ನೂ ಕುಂಬಳೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದಲ್ಲಿ ಸೂರ್ಯಾಘಾತಕ್ಕೆ ಒಳಗಾಗಿ ಗಾಯಗೊಂಡವರ ಸಂಖ್ಯೆ 725 ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.