ಕಾಸರಗೋಡು: ಜಿಲ್ಲೆಯಲ್ಲಿ ಬಿಸಿಲಿನ ತಾಪ ಮುಂದುವರಿದಿದ್ದು, ಪಳ್ಳಿಕೆರೆ ಪೂಚಕ್ಕಾಡಿನಲ್ಲಿ ಮೂರು ವರ್ಷದ ಮಗುವಿಗೆ ಸುಟ್ಟ ಗಾಯಗಳಾಗಿವೆ.

ಪೂಚಕ್ಕಾಡು ಹಮೀದ್ ಎಂಬುವವರ ಮಗ ನಿಜಾವತ್ ತಂದೆ ಜತೆಯಲ್ಲಿ ಬೈಕ್ನಲ್ಲಿ ಚೆಮ್ನಾಡಿನಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬಿಸಿಲಿನಿಂದ ಮೈಕೈ ಸುಟ್ಟ ಗಾಯವಾಯಿತು. ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.

ಕಾಸರಗೋಡು ಸಹಿತ ಕೇರಳದ ಎಂಟು ಜಿಲ್ಲೆಯಲ್ಲಿ ಬುಧವಾರ ಸರಾಸರಿಗಿಂತ ಮೂರು ಡಿಗ್ರಿಯಷ್ಟು ಉಷ್ಣತೆ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೂರ್ಯಾಘಾತ ತಟ್ಟದಿರಲು ಜನರು ಹಗಲು 11 ಗಂಟೆಯಿಂದ ಮೂರು ಗಂಟೆಯವರೆಗೆ ಉರಿಬಿಸಿಲಿನಲ್ಲಿ ನಿಲ್ಲಬಾರದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.