ನವದೆಹಲಿ: 1980ರ ಅರಣ್ಯ (ಸಂರಕ್ಷಣಾ) ಕಾಯ್ದೆಯ ಸೆಕ್ಷನ್ 2ರ ಅಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ನೀಡಲಾದ ಅಂತಹ ಯಾವುದೇ ಗುತ್ತಿಗೆ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಕಲಘಟಗಿ ತಾಲ್ಲೂಕಿನ ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘಕ್ಕೆ 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ಮುಂದುವರಿಸಲು ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ರದ್ದುಪಡಿಸಿದೆ.

ಅರಣ್ಯ ಭೂಮಿಯನ್ನು ಕೃಷಿ ಉದ್ದೇಶಗಳಿಗಾಗಿ ಗುತ್ತಿಗೆ ನೀಡುವುದೇ ಕಾನೂನುಬಾಹಿರ ಮತ್ತು 1980ರ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠವು, ‘ತಜ್ಞರೊಂದಿಗೆ ಸಮಾಲೋಚಿಸಿ ಸ್ಥಳೀಯ ಸಸ್ಯಗಳು ಮತ್ತು ಮರಗಳನ್ನು ನೆಡುವ ಮೂಲಕ 134 ಎಕರೆ ಪ್ರದೇಶದಲ್ಲಿ ಅರಣ್ಯವನ್ನು ಪುನರ್ಸ್ಥಾಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ 12 ತಿಂಗಳಲ್ಲಿ ಅನುಸರಣಾ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶನ ನೀಡಿದೆ.

‘ಪ್ರತಿವಾದಿ ಸಹಕಾರ ಸಂಘಕ್ಕೆ ಕೃಷಿ ಉದ್ದೇಶಗಳಿಗಾಗಿ ಅರಣ್ಯಭೂಮಿ ಗುತ್ತಿಗೆ ನೀಡಿದ್ದು ಸರಿಯಲ್ಲ. ಇದರಿಂದಾಗಿ, ಸುಮಾರು 134 ಎಕರೆಗಳಷ್ಟು ವಿಸ್ತಾರವಾದ ಅರಣ್ಯ ಪ್ರದೇಶ ನಾಶವಾಯಿತು. ಅಲ್ಲದೇ, ಸಹಕಾರ ಸಂಘವು 10 ವರ್ಷಗಳಿಗೂ ಹೆಚ್ಚು ಕಾಲ ಅರಣ್ಯ ಪ್ರದೇಶದ ಗುತ್ತಿಗೆ ಪಡೆದಿತ್ತು. ಗುತ್ತಿಗೆಯ ವಿಸ್ತರಣೆಗೆ ಸಂಘ ಅರ್ಹತೆಯನ್ನೇ ಹೊಂದಿರಲಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್ನ 2009ರ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಅರಣ್ಯ ಇಲಾಖೆ ಸಲ್ಲಿಸಿದ ಸಿವಿಲ್ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.

ಈ ಜಾಗವು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ಯಾವುದೇ ಸಾಗುವಳಿ ಇಲ್ಲ ಎಂದು ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿತು. ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 1996 ಹಾಗೂ 2000ರಲ್ಲಿ ತೀರ್ಪು ನೀಡಿದೆ ಎಂದೂ ವಾದಿಸಿತು.

ಈ ವಾದಗಳನ್ನು ಅಂಗೀಕರಿಸಿದ ನ್ಯಾಯಪೀಠವು, ‘ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶಕ್ಕೆ ಕಾರಣ ಆಗಿರುವುದರಿಂದ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡುವುದೇ ಅನಪೇಕ್ಷಿತ. ಗುತ್ತಿಗೆ ನೀಡುವ ಹಂತದಲ್ಲಿ ನಡೆದ ಅಕ್ರಮವನ್ನು ಶಾಶ್ವತಗೊಳಿಸಲು ಅನುಮತಿಯನ್ನು ಮುಂದುವರಿಸುವುದು ಸರಿಯಲ್ಲ ಎಂದೂ ಹೇಳಿದೆ.

ಅರಣ್ಯ ಇಲಾಖೆಯು 2007ರಲ್ಲೇ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರುವುದರಿಂದ, ಸಂಘಕ್ಕೆ ಗುತ್ತಿಗೆ ಮುಂದುವರಿಸಲು ಅವಕಾಶ ನೀಡುವ ಹೈಕೋರ್ಟ್ ನಿರ್ದೇಶನವು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು:

ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿರುವ 134 ಎಕರೆ ಮತ್ತು 6 ಗುಂಟೆಯನ್ನು ಸಹಕಾರ ಸಂಘಕ್ಕೆ ಹತ್ತು ವರ್ಷಗಳ ಅವಧಿಗೆ ಅರಣ್ಯ ಇಲಾಖೆ 1976ರಲ್ಲಿ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿಯಲ್ಲಿ, ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಅರಣ್ಯ ಇಲಾಖೆ 1985ರಲ್ಲಿ ನಿರಾಕರಿಸಿತ್ತು.

ಈ ಆದೇಶ ಪ್ರಶ್ನಿಸಿ ಸಂಘವು 1987ರಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ, ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿತ್ತು. ಜಾಗ ಸ್ವಾಧೀನಕ್ಕೆ ಅರಣ್ಯ ಸಂರಕ್ಷಣಾಧಿಕಾರಿ 2004ರಲ್ಲಿ ಆದೇಶ ಹೊರಡಿಸಿದ್ದರು. ಸಂಘ ಸಲ್ಲಿಸಿದ್ದ ಮೇಲ್ಮನವಿಯನ್ನು ಅರಣ್ಯ ಸಂರಕ್ಷಣಾಧಿಕಾರಿ 2006ರಲ್ಲಿ ತಿರಸ್ಕರಿಸಿದ್ದರು. ಅರಣ್ಯ ಇಲಾಖೆಯು ಜಾಗವನ್ನು 2007ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.