ಭದ್ರಾವತಿ: ನಗರದಲ್ಲಿ ಜ.24ರಿಂದ ಫೆ.1ರವರೆಗೆ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ನಡೆಯಲಿದ್ದು, ವಿಎಎಸ್ಎಲ್ ಹೆಲಿಪ್ಯಾಡ್ ಮೈದಾನದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿವೆ.

ಮಹೋತ್ಸವದ ಹಿನ್ನೆಲೆಯಲ್ಲಿ ‘ವೈರಾಗ್ಯನಿಧಿ ಅಕ್ಕಮಹಾದೇವಿ’ ಮಹಾದ್ವಾರ ನಿರ್ಮಿಸಲಾಗಿದೆ. ‘ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ’ ಅವರ ಹೆಸರಿನ ಆಕರ್ಷಕ ಮಹಾಮಂಟಪದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸಭಿಕರಿಗೆ 25,000ಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ದೀಪಾಲಂಕಾರ ಮನಸೂರೆಗೊಳ್ಳುವಂತಿದೆ. ವಚನಗಳನ್ನು ಸಾರುವ ಫಲಕ ಅಳವಡಿಸಲಾಗಿದೆ.

ಮಹೋತ್ಸವದಲ್ಲಿ ಕೃಷಿಮೇಳ ನಡೆಯಲಿದ್ದು, ಪುಸ್ತಕ ಮಳಿಗೆ, ವೈದ್ಯಕೀಯ ಮಳಿಗೆ, ತಿಂಡಿ–ತಿನಿಸು ಅಂಗಡಿ, ಆಟಿಕೆ, ಆಲಂಕಾರಿಕ ಸಾಮಗ್ರಿ ಸೇರಿದಂತೆ ನೂರಾರು ಮಳಿಗೆಗಳನ್ನು ಅಣಿಗೊಳಿಸಲಾಗಿದೆ. ಸಭಿಕರಿಗಾಗಿ ಶೌಚಾಲಯ, ವಾಹನಗಳ ನಿಲುಗಡೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಷ್ಟ್ರ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಅಖಾಡ ಸಿದ್ಧಪಡಿಸಲಾಗಿದೆ. ಕಬಡ್ಡಿ, ವಾಲಿಬಾಲ್, ಯೋಗಾಸನ ಸ್ಪರ್ಧೆಗಳಿಗಾಗಿ ಪ್ರತ್ಯೇಕ ಅಂಕಣ ನಿರ್ಮಿಸಲಾಗಿದೆ. ಹಗ್ಗ ಜಗ್ಗಾಟ, ಚಮಚ ಮತ್ತು ನಿಂಬೆಹಣ್ಣು ಓಟ, ಗೋಣಿಚೀಲದ ಓಟ, ಮಡಕೆ ಒಡೆಯುವ ಆಟ, ಸಂಗೀತ ಕುರ್ಚಿ ಸೇರಿದಂತೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕ್ರೀಡೆಗಳು ನಡೆಯಲಿವೆ.

ಭಜನಾ ಸ್ಪರ್ಧೆ, ದೇಶಭಕ್ತಿ ಗೀತೆ, ನೃತ್ಯ, ರಸಪ್ರಶ್ನೆ, ಭಾಷಣ, ವೀರಗಾಸೆ, ವಚನ ಗಾಯನ, ನೃತ್ಯ, ಜಾನಪದ ನೃತ್ಯ, ವಿಜ್ಞಾನ ವಸ್ತು ಪ್ರದರ್ಶನ, ಪ್ರತಿಭಾನ್ವೇಷಣೆ, ಜಾನಪದ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಸ್ಕೃತಿ, ಕಲೆ, ಆರೋಗ್ಯ, ರಾಜಕೀಯ, ಸಾಹಿತ್ಯ, ಶಿಕ್ಷಣ, ಸರ್ವ ಧರ್ಮ ಸಮನ್ವಯ, ಕೃಷಿ, ಧರ್ಮ, ವಿಜ್ಞಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಸಮಾವೇಶದ ಮೊದಲ ದಿನ ಹಾಗೂ ಕೊನೆಯ ದಿನ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ.

ಶ್ರೀಗಳಿಗೆ ಸ್ವಾಗತ: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಬೆಳಿಗ್ಗೆ ಸಿರಿಗೆರೆಯಿಂದ ಹೊರಟು ಸಾಸಲು, ಸಂತೆಬೆನ್ನೂರು, ಚನ್ನಗಿರಿಗೆ ಆಗಮಿಸಲಿದ್ದಾರೆ. ಅಲ್ಲಿನ ಚೆನ್ನಮ್ಮಾಜಿ ಕಲ್ಯಾಣ ಮಂದಿರದಲ್ಲಿ ಪ್ರಸಾದ ಸ್ವೀಕರಿಸಿ ಬಳಿಕ ಆಗರದಹಳ್ಳಿ, ಅರಹತೊಳಲು, ಅರಳಿಹಳ್ಳಿ, ವೀರಾಪುರ ಮಾರ್ಗವಾಗಿ ಸಂಜೆ 4.30ಕ್ಕೆ ಭದ್ರಾವತಿ ತಲುಪಲಿದ್ದಾರೆ. ಭದ್ರಾವತಿಯ ಎಪಿಎಂಸಿ ಬಳಿ ಶ್ರೀಗಳನ್ನು ಸ್ವಾಗತಿಸಲಾಗುವುದು ಎಂದು ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಸಮಾವೇಶ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್, ಅಗ್ನಿಶಾಮಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇಂದಿನ ಕಾರ್ಯಕ್ರಮಗಳು

ತರಳಬಾಳು ಹುಣ್ಣಿಮೆ ಮಹಾ ಮಂಟಪ ಆವರಣದಲ್ಲಿ ಸಂಜೆ 6.30ಕ್ಕೆ ನಡೆಯುವ ಮೊದಲ ದಿನದ ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಸದರಾದ ಬಿ.ವೈ. ರಾಘವೇಂದ್ರ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ.

ಜಾನಪದ ತಜ್ಞ ಶಂಭು ಬಳಿಗಾರ್ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಕಲಾವಿದ ಅರುಣ್ ಸಾಗರ್ ಸಾಹಿತಿ ಶುಭಾ ಮರವಂತೆ ಉಪನ್ಯಾಸ ನೀಡುವರು. ಶಾಸಕರಾದ ಎಂ.ಚಂದ್ರಪ್ಪ ಶಾರದಾ ಪೂರ್ಯಾನಾಯ್ಕ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಭಾಗವಹಿಸುವರು.

ವಿದ್ವಾನ್ ನಿಶಾದ್ ಹರ್ಲಾಪುರ ಅವರಿಂದ ವಚನ ಗಾಯನ ಸಿರಿಗೆರೆ ತರಳಬಾಳು ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ತರಳಬಾಳು ಕಲಾ ಸಂಘದಿಂದ ಮಲ್ಲಿ ಹಗ್ಗ ಭದ್ರಾವತಿ ನಟರಾಜ ಸಂಗೀತ ಮತ್ತು ಭರತನಾಟ್ಯ ಕಲಾ ಕೇಂದ್ರದಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.