ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ 2018–19ರಲ್ಲಿ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಅದನ್ನು ಜೂನ್ 12ರಿಂದ ಮುಂದುವರಿಸಲಾಗುತ್ತಿದೆ.

‘ಕರ್ನಾಟಕ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣಾ ನಿಯಂತ್ರಣ) (ತಿದ್ದುಪಡಿ) ಕಾಯ್ದೆ’ಯಂತೆ ಈ ಪ್ರಕ್ರಿಯೆ ನಡೆಯಲಿದ್ದು, 2018–19ರ ವರ್ಗಾವಣೆಗಳಿಗೆ ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗಿದ್ದ ಶಿಕ್ಷಕರ ಕೋರಿಕೆ ಅರ್ಜಿಗಳನ್ನು ಪರಿಗಣಿಸಲಾಗುವುದು.

ಶಿಕ್ಷಕರು ಇಚ್ಛಿಸಿದಲ್ಲಿ ಅರ್ಜಿಯಲ್ಲಿ ಆದ್ಯತೆ ಇತ್ಯಾದಿ ತಿದ್ದುಪಡಿಗಳನ್ನು ಅಳವಡಿಸಲು ಅವಕಾಶ ನೀಡಲಾಗುವುದು. ವರ್ಗಾವಣೆ ಕೋರಿ ಇತರ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಸಹ ಅವಕಾಶವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.

ಶಿಕ್ಷಕರ ಮಾಹಿತಿ ತಂತ್ರಾಂಶ ಟಿಡಿಎಸ್‌ನಲ್ಲಿ ಸೇವಾ ಮತ್ತಿತರ ಅಗತ್ಯ ವಿವರಗಳನ್ನುಅಳವಡಿಸಿರಬೇಕು. ಈ ಮಾಹಿತಿಗಳನ್ನು ದೃಢಪಡಿಸಲು ಉಪನಿರ್ದೇಶಕರು ಮತ್ತು ಬಿಇಒಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.