ಗೌರಿಗದ್ದೆ (ಚಿಕ್ಕಮಗಳೂರು): ‘ಇದು ರೈತ ವಿರೋಧಿ ಸರ್ಕಾರ ಎಂಬುದಕ್ಕೆ ಗಣರಾಜ್ಯೋತ್ಸವದ ದಿನ ಪ್ರತಿಭಟನೆ ನಡೆಯುತ್ತಿರುವುದೇ ಸಾಕ್ಷಿ. ಈ ಸರ್ಕಾರಕ್ಕೆ ಅಂತ್ಯ ಸಮೀಪಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರ ಹೋರಾಟ ಮಾಡಲು ದೆಹಲಿಯಲ್ಲೇ ಬಿಟ್ಟಿದ್ದಾರೆ, ಬೆಂಗಳೂರಿನ ಒಳಕ್ಕೆ ರೈತರು ಬರಲು ಯಾಕೆ ಬಿಡುತ್ತಿಲ್ಲ? ರೈತರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಇವರು ಊಟ ಮಾಡಲಿಕ್ಕೆ ಸಾಧ್ಯ ಇದೆಯಾ?’ ಎಂದು ಪ್ರಶ್ನಿಸಿದರು.

‘ಸಾಹುಕಾರರ ದೊಡ್ಡ ಕಾರುಗಳಷ್ಟೇ ಬೆಂಗಳೂರಿನಲ್ಲಿ ಓಡಾಡಬೇಕಾ? ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಿ, ರೈತರ ಟ್ರಾಕ್ಟರ್‌ಗಳು ಓಡಾಡಿದರೆ ತಪ್ಪೇನಿದೆ? ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರು ರಾಜ್ಯದ ಜನರ ಆಸ್ತಿ, ಸರ್ಕಾರ ನಡೆಸುವವರ ಆಸ್ತಿ ಅಲ್ಲ. ರೈತರನ್ನು ಬೆಂಗಳೂರಿಗೆ ಬಿಡದೆ ತಡೆದಿರುವುದು ಖಂಡನೀಯ. ಅದರ ಕೋಪ, ತಾಪ, ಶಾಪ ಎಲ್ಲವೂ ಈ ಸರ್ಕಾರಕ್ಕೆ ತಗುಲುತ್ತದೆ’ ಎಂದು ಚುಚ್ಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.