ಬೆಂಗಳೂರು: ವಿಶೇಷ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣ ಓದಲು ಒಪ್ಪದ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರ ನಡೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ರಾಷ್ಟ್ರಗೀತೆಗೆ ಅಪಚಾರ, ಸಂವಿಧಾನಕ್ಕೆ ದ್ರೋಹ, ಕರ್ನಾಟಕಕ್ಕೆ ಅಗೌರವ, ಕನ್ನಡಿಗರಿಗೆ ಅಪಮಾನ, ರಾಜ್ಯ ಸರ್ಕಾರಕ್ಕೆ ಅವಮಾನ... ರಾಜ್ಯಪಾಲರಿಂದ ಇಷ್ಟೆಲ್ಲ ಅಪಚಾರವಾದರೂ ಬಿಜೆಪಿಯವರ ಸಮರ್ಥನೆ ನೋಡುತ್ತಿದ್ದರೆ ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೇ ಅಥವಾ ಜಗನ್ನಾಥ ಭವನದಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಷಣದ ನಂತರ ರಾಷ್ಟ್ರಗೀತೆಯ ಬ್ಯಾಂಡ್ ನುಡಿಸುವುದು ನಿಯಮ, ಆದರೆ ರಾಜ್ಯಪಾಲರು ರಾಷ್ಟ್ರಗೀತೆ ನುಡಿಸಲು ಒಂದು ಕ್ಷಣವೂ ಅವಕಾಶ ನೀಡದೆ ಅವಸರದ ನಡೆ ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರ ಈ ದೇಶದ್ರೋಹಿ ನಡವಳಿಕೆಯನ್ನು ಖಂಡಿಸದೆ ಸಮರ್ಥಿಸುತ್ತಿರುವ ಬಿಜೆಪಿಯವರದ್ದು ಬೂಟಾಟಿಕೆಯ ದೇಶಭಕ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಸಂಸತ್ತಿನಲ್ಲಿ “ವಂದೇ ಮಾತರಂ” ಬಗ್ಗೆ ಮೂರು ದಿನಗಳ ಕಾಲ ಚರ್ಚೆ ನಡೆಸುವ ಬಿಜೆಪಿಗೆ “ಜನ ಗಣ ಮನ”ದ ಬಗ್ಗೆ ಮೂರು ನಿಮಿಷವೂ ಚರ್ಚಿಸದಷ್ಟು ಅಸಹನೆ ಏಕೆ? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರಗೀತೆಯನ್ನು ವಿರೋಧಿಸುವ ಸಂಘದ ಪಾಠವನ್ನು ಪಾಲಿಸುತ್ತಿದ್ದಾರೆಯೇ? ಬಿಜೆಪಿಯವರಲ್ಲಿ ಎಳ್ಳು ಕಾಳಷ್ಟು ದೇಶಭಕ್ತಿ ಇದ್ದಿದ್ದೇ ಆದರೆ ರಾಷ್ಟ್ರಗೀತೆಗೆ, ಸಂವಿಧಾನಕ್ಕೆ ರಾಜ್ಯಪಾಲರಿಂದ ಆಗಿರುವ ಅವಮಾನವನ್ನು ಖಂಡಿಸಲಿ ಎಂದು ಆಗ್ರಹಿಸಿದ್ದಾರೆ.
.ತಮ್ಮ ಹುದ್ದೆಗೆ ಅಗೌರವ ತೋರಿದ ರಾಜ್ಯಪಾಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲೀನ್.ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ನೀಡಿದ್ದ ಭಾಷಣದ ಮುಖ್ಯಾಂಶಗಳು ಇಂತಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.