‘ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ’
ಭಾಷಣ ನಿರಾಕರಣೆಗೆ ರಾಜ್ಯಪಾಲರು ನೀಡಿದ ಕಾರಣಗಳನ್ನು ಉಲ್ಲೇಖಿಸಿ ಮಾತನಾಡಿದ ಸ್ಟಾಲಿನ್ ‘14 ವರ್ಷಗಳ ಬಳಿಕ ತಮಿಳುನಾಡು ಎರಡಂಕಿಯ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಇದನ್ನು ಕೇಂದ್ರಸರ್ಕಾರವು ಒಪ್ಪಿಕೊಂಡಿದೆ. ಇದನ್ನು ಹೇಳಿರುವುದು ನಾವಲ್ಲ ಕೇಂದ್ರ ಸರ್ಕಾರದ ಸಾಂಖ್ಯಿಕ ಇಲಾಖೆ. ರಾಜ್ಯಪಾಲರಿಗೆ ಪ್ರಶ್ನೆಗಳಿದ್ದರೆ ಅವರನ್ನು ಇಲ್ಲಿಗೆ ಕಳುಹಿಸಿದ ಕೇಂದ್ರ ಸರ್ಕಾರದ ಬಳಿಯೇ ಕೇಳಬೇಕು’ ಎಂದು ಸ್ಟಾಲಿನ್ ಹೇಳಿದರು.