ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್ ಖಡ್ಗ ₹ 143 ಕೋಟಿಗೆ ಹರಾಜು

Published 26 ಮೇ 2023, 13:46 IST
Last Updated 26 ಮೇ 2023, 13:46 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ 18ನೇ ಶತಮಾನದ ದೊರೆ ಟಿಪ್ಪು ಸುಲ್ತಾನ್‌ ತನ್ನ ಮಲಗುವ ಕೋಣೆಯಲ್ಲಿ ಇರಿಸಿಕೊಂಡಿದ್ದ ಖಡ್ಗವೊಂದು ಲಂಡನ್‌ನಲ್ಲಿ ₹143 ಕೋಟಿಗೆ ಹರಾಜಾಗಿದೆ ಎಂದು ಹರಾಜು ಸಂಸ್ಥೆ ಬೋನ್‌ಹ್ಯಾಮ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಉದ್ಯಮಿ ವಿಜಯ್ ಮಲ್ಯ ವಶದಲ್ಲಿದ್ದ ಖಡ್ಗವನ್ನು ಲಂಡನ್‌ನಲ್ಲಿ ಇತ್ತೀಚೆಗೆ ಹರಾಜು ಮಾಡಲಾಗಿದ್ದು, ವ್ಯಕ್ತಿಯೊಬ್ಬರು ₹143 ಕೋಟಿಗೆ ಖರೀದಿಸಿದ್ದಾರೆ.

ಬ್ರಿಟಿಷ್ ರಾಜಮನೆತನದ ವಸ್ತುಸಂಗ್ರಹಾಲಯದಲ್ಲಿದ್ದ ಖಡ್ಗವನ್ನು ಮಲ್ಯ ಅವರು ₹1.57 ಕೋಟಿಗೆ 2004ರಲ್ಲಿ ಖರೀದಿಸಿದ್ದರು. ಮಲ್ಯ ಅವರು ಇತ್ತೀಚೆಗೆ ಕೋರ್ಟ್‌ಗೆ ಹಾಜರಾದಾಗ ‘ಖಡ್ಗ ಎಲ್ಲಿದೆಯೋ ಗೊತ್ತಿಲ್ಲ’ ಎಂದು ಹೇಳಿದ್ದರು. ಅದೇ ಖಡ್ಗ ಈಗ ಮತ್ತೊಮ್ಮೆ ಮಾರಾಟವಾಗಿದೆ. 

ಖಡ್ಗ ಮಾರಿದವರು ಮತ್ತು ತೆಗೆದುಕೊಂಡವರ ಹೆಸರನ್ನು ಪ್ರಕಟಿಸಲು ಸಾಧ್ಯವಿಲ್ಲ. ಹೆಸರು ಬಹಿರಂಗವಾದರೆ ಗೋಪ್ಯತೆಯ ಉಲ್ಲಂಘನೆಯಾಗುತ್ತದೆ ಮತ್ತು ಸುರಕ್ಷತೆಯ ಸಮಸ್ಯೆಯೂ ಆಗುತ್ತದೆ ಎಂದು ಬೋನ್‌ಹ್ಯಾಮ್‌ ಹೇಳಿದೆ.

1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಮರಣ ನಂತರ ಈ ಖಡ್ಗವನ್ನು ಅರಮನೆಯ ಖಾಸಗಿ ಕೋಣೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಅದನ್ನು ಬ್ರಿಟಿಷ್‌ ಸೇನೆ ಮೇಜರ್‌ ಜನರಲ್‌ ಡೇವಿಡ್ ಬೇರ್ಡೆಗೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT