ನವದೆಹಲಿ: ಸಂಚಾರ ನಿಯಮ ಉಲ್ಲಂಘನೆಗಾಗಿ ನೂತನ ಮೋಟಾರು ವಾಹನ ಕಾಯ್ದೆಯಡಿ ನಿಗದಿಪಡಿಸಿರುವದಂಡವನ್ನು ಕನಿಷ್ಠ ಮೊತ್ತಕ್ಕಿಂತಲೂ ಕಡಿಮೆ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ರಾಜ್ಯಗಳಿಗೆ ಈ ಸಂಬಂಧ ಸೂಚನೆ ಕಳುಹಿಸಿರುವ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ‘ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಸಂಸತ್ತು ಅಂಗೀಕರಿಸಿದೆ. ರಾಷ್ಟ್ರಪತಿ ಅನುಮೋದನೆ ಇಲ್ಲದ ಹೊರತು ರಾಜ್ಯಗಳು ದಂಡವನ್ನು ಕನಿಷ್ಠ ಮೊತ್ತಕ್ಕಿಂತಲೂ ಕಡಿಮೆ ಮಾಡಬಾರದು’ ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಕಾಯ್ದೆಯ ಬಳಿಕ ರಾಜ್ಯವೊಂದು ದಂಡದ ಮೊತ್ತ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸಾರಿಗೆ ಸಚಿವಾಲಯವು ಕಾನೂನು ಸಚಿವಾಲಯದ ಸಲಹೆಯನ್ನು ಕೋರಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚಿನ ದಂಡ ವಿಧಿಸುವ ತಿದ್ದುಪಡಿ ಕಾಯ್ದೆಯು ಸೆಪ್ಟೆಂಬರ್ 1, 2019ರಿಂದ ಜಾರಿಗೆ ಬಂದಿದೆ.

ಭಾರತದ ಅಟಾರ್ನಿ ಜನರಲ್ ಅಭಿಪ್ರಾಯ ಪಡೆದ ನಂತರ ಕಾನೂನು ಸಚಿವಾಲಯ ಸಲಹೆ ನೀಡಿದೆ. ಅಟಾರ್ನಿ ಜನರಲ್ ಅವರು, ‘ಮೋಟಾರು ವಾಹನ ಕಾಯ್ದೆಯು ಸಂಸತ್ತಿನ ಕಾಯ್ದೆ. ರಾಜ್ಯಗಳು ಇದರಲ್ಲಿ ಉಲ್ಲೇಖಿಸಿದ ಮೊತ್ತ ಕಡಿತಗೊಳಿಸಲಾಗದು. ಕಾಯ್ದೆ ರೂಪಿಸಿದ್ದರೆ ಅದಕ್ಕೆ ರಾಷ್ಟ್ರಪತಿ ಅನುಮೋದನೆ ಅಗತ್ಯ ಎಂದಿದ್ದಾರೆ’ ಎಂಬುದನ್ನು ರಾಜ್ಯಗಳಿಗೆ ಕಳುಹಿಸಿರುವ ಸಲಹಾ ಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.