ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ ಐದು ವರ್ಷಗಳ ನಂತರ ಉನ್ನತ ಶಿಕ್ಷಣ ಇಲಾಖೆ 2001ರ ನಿಯಮ ಉಲ್ಲೇಖಿಸಿದೆ. 2002, 2012ರಲ್ಲಿ ಬ್ಯಾಕ್‌ಲಾಗ್ ಭರ್ತಿ ಮಾಡಿದಾಗ ನಿಯಮ ಇರಲಿಲ್ಲವೇ? ಈಗ ಏಕೆ ಇಂತಹ ದ್ವಿಮುಖ ನೀತಿ?
ಕೃಷ್ಣದಾಸ್, ಪ್ರಧಾನ ಕಾರ್ಯದರ್ಶಿ, ಪರಿಶಿಷ್ಟ ಜಾತಿ, ವರ್ಗಗಳ ಪದವೀಧರರ ಒಕ್ಕೂಟ
ಹಿಂದಿನ ಸರ್ಕಾರ 2023ರವರೆಗೂ ಕ್ರಮಕೈಗೊಳ್ಳದೆ ವಿಳಂಬ ಮಾಡಿತ್ತು. ತಾಂತ್ರಿಕ ಶಿಕ್ಷಣದಲ್ಲಿ ಬೋಧಕೇತರ ಹುದ್ದೆಗಳೂ ಅಗತ್ಯವಿರುವ ಕಾರಣ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿದ್ದೇವೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ