ಬೆಂಗಳೂರು: ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಅನ್ವಯ ಮಾಡುವಾಗ ಆಯಾ ವಿಶ್ವವಿದ್ಯಾಲಯವನ್ನೇ ಘಟಕವಾಗಿ ಪರಿಗಣಿಸಲು ಸಂಪುಟ ಉಪಸಮಿತಿ ಸಮ್ಮತಿಸಿದ್ದು, ಅಗತ್ಯ ನಿಯಮಗಳನ್ನು ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಒಳ ಮೀಸಲಾತಿ ಹಂಚಿಕೆಯಲ್ಲಿ ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ವರ್ಗವಾರು (ಆಯಾ ವಿಷಯ) ನೇಮಕಾತಿ ಸಮಯದಲ್ಲಿ ಒಂದೇ ಹುದ್ದೆಗಳು ಇರುವಾಗ ಒಳ ಮೀಸಲಾತಿ ಗುಂಪಿನ ‘ಎ’ ವರ್ಗಕ್ಕೆ ಮಾತ್ರವೇ ಉದ್ಯೋಗ ದೊರೆಯುತ್ತಿದೆ. ಉಳಿದ ಎರಡೂ ವರ್ಗಗಳ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಾರೆ ಎಂಬ ದೂರುಗಳ ಆಧಾರದಲ್ಲಿ ಸಮಿತಿ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ.

ನೇಮಕಾತಿ ಮಾಡುವಾಗ ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸಿದರೆ, ಆಗ ಮೂರೂ ವರ್ಗಗಳಿಗೂ ಅವಕಾಶ ದೊರೆಯುತ್ತದೆ ಎನ್ನುವುದು ಪರಿಶಿಷ್ಟ ಸಮುದಾಯಗಳ ಬೇಡಿಕೆ. ಪರಿಶಿಷ್ಟರ 101 ಜಾತಿಗಳಿಗೂ ಸಮಾನ ನ್ಯಾಯ ಹಂಚಿಕೆಗೆ ಇದೇ ಮಾರ್ಗದ ಅನುಸರಣೆ ಸೂಕ್ತವಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.