ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2022ರಲ್ಲಿ 438ನೇ ರ‍್ಯಾಂಕ್, 2023ರಲ್ಲಿ 600ನೇ ರ‍್ಯಾಂಕ್ ಪಡೆದಿದ್ದಾರೆ ಮೈಸೂರಿನ ಡಾ. ಭಾನುಪ್ರಕಾಶ್. ದೇವದಾಸಿಯೊಬ್ಬರ ಮಗುವೊಂದು ಸರಿಯಾದ ಚಿಕಿತ್ಸೆ ಸೌಲಭ್ಯ ಇಲ್ಲದೆ ಅಸುನೀಗಿದಾಗ ಕನಿಕರ ಪಟ್ಟ ವೈದ್ಯ ಭಾನುಪ್ರಕಾಶ್, ಆಡಳಿತ ಸೇವೆಗೆ ಬಂದರೆ ಇಂತಹ ಸಹಸ್ರಾರು ಜನರಿಗೆ ಸಕಾಲಕ್ಕೆ ಸರ್ಕಾರಿ ಸೌಲಭ್ಯ ಒದಗಿಸಿಕೊಡಬಹುದಲ್ಲ ಎಂಬ ಕಾರಣಕ್ಕೆ ಛಲದಿಂದ ಓದಿ ಈಗ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿನ ಅವರ ಅನುಭವ ಮತ್ತು ಈಗ ಪರೀಕ್ಷಾ ಸಿದ್ಧತೆಯಲ್ಲಿರುವವರಿಗೆ ಅಮೂಲ್ಯ ಸಲಹೆಗಳನ್ನು ಈ ವಿಡಿಯೊದಲ್ಲಿ ನೀಡಿದ್ದಾರೆ.