ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್ ಜನ್ಮದಿನ: ಶುಭಾಶಯ ಕೋರಿದ ಉಪ ರಾಷ್ಟ್ರಪತಿ ಧನಕರ್‌

Published 15 ಮೇ 2024, 15:48 IST
Last Updated 15 ಮೇ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬುಧವಾರ ಜನ್ಮದಿನದ ಶುಭಾಶಯ ಕೋರಿರುವ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ‘ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಕ್ಕಾಗಿ ನಿಮಗೆ ದೀರ್ಘ ಆಯಸ್ಸು ದೊರಕಲಿ’ ಎಂದು ಹಾರೈಸಿದ್ದಾರೆ.

ಬುಧವಾರ ಶಿವಕುಮಾರ್‌ ಅವರ ಜನ್ಮದಿನ. ಅವರಿಗೆ ಪತ್ರ ಬರೆದಿರುವ ಉಪ ರಾಷ್ಟ್ರಪತಿ, ‘ನಿಮಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸಂತೋಷ, ಆರೋಗ್ಯ ಕರುಣಿಸಲಿ’ ಎಂದು ಶುಭ ಕೋರಿದ್ದಾರೆ.

ಶಿವಕುಮಾರ್‌ ಅವರು ಉಪ ರಾಷ್ಟ್ರಪತಿಯವರ ಪತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಧನಕರ್‌ ಅವರಿಗೆ ಮಾರೋಲೆ ಬರೆದಿರುವ ಉಪ ಮುಖ್ಯಮಂತ್ರಿ, ಶುಭಾಶಯ ಕೋರಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT