ಸಿಂದಗಿ (ವಿಜಯಪುರ ಜಿಲ್ಲೆ): ಭೀಮಾ ಕೋರೆಗಾಂವ್ ಕದನದ ವಿಜಯೋತ್ಸವದ 201ನೇ ವರ್ಷಾಚರಣೆ ಅಂಗವಾಗಿ, ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಬಳಿ ಸ್ಥಾಪಿಸಿರುವ ವಿಜಯಸ್ತಂಭ ಮಂಗಳವಾರ ಲೋಕಾರ್ಪಣೆಗೊಂಡಿತು.

ದಲಿತ ಸಂಘಟನೆಗಳ ಪ್ರಮುಖರು ಸ್ವಂತ ಹಣದಿಂದ ನಿರ್ಮಿಸಿದ ಈ ಸ್ತಂಭ 46 ಅಡಿ ಎತ್ತರವಿದ್ದು, ಭೀಮಾ ಕೋರೆಗಾಂವ್‌ನಲ್ಲಿ ಇರುವ ಸ್ಮಾರಕದ ಮಾದರಿಯಲ್ಲೇ ಇದೆ.

ಇಲ್ಲಿಯ ಅಂಬೇಡ್ಕರ್ ಭವನದಿಂದ ಸಂಘಪಾಲ ಬಂತೇಜಿ ನೇತೃತ್ವದಲ್ಲಿ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದ ನೂರಾರು ಮಹಿಳೆಯರು ಹಾಗೂ ಯುವಕರು, ವಿಜಯಸ್ತಂಭ ಸ್ಥಳಕ್ಕೆ ಬಂದು ಗೌರವ ಸಲ್ಲಿಸಿದರು. ಬೌದ್ಧ ಉಪಾಸಕರು ಬುದ್ಧ ಪ್ರಾರ್ಥನೆ ಸಲ್ಲಿಸಿದರು. ಜೈಭೀಮ್ ಹಾಗೂ ಕೋರೆಗಾಂವ್ ಯುದ್ಧದ ಪ್ರಮುಖ ಸಿದ್ಧನಾಕ ಹೆಸರಿನಲ್ಲಿ ಜನಸ್ತೋಮ ಕೂಗಿದ ಘೋಷಣೆ ಮುಗಿಲು ಮುಟ್ಟಿತ್ತು. ಇದೇ ವೇಳೆ, ಭೀಮಗೀತೆ ಹಾಗೂ ಕ್ರಾಂತಿಗೀತೆಗಳನ್ನು ಹಾಡಲಾಯಿತು.

ಹೂವಿನಿಂದ ಸಿಂಗಾರಗೊಂಡಿದ್ದ ವಿಜಯಸ್ತಂಭದ ಎದುರು ದಲಿತ ಯುವಕರು, ಮಹಿಳೆಯರು ಫೋಟೊ ತೆಗೆಸಿಕೊಂಡಿದ್ದು ಗಮನಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.