ಭಟ್ಕಳ: ವಾಟ್ಸ್ಆ್ಯಪ್ ಗ್ರೂಪೊಂದರದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಲಾಗುತ್ತಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಆಪ್ತ ಸಹಾಯಕ ಕರಿಯಪ್ಪ ನಾಯ್ಕ ಎಎಸ್ಪಿ ಗೌತಮ್ ಅವರಿಗೆ ದೂರು ನೀಡಿದ್ದಾರೆ.

‘ಹೋಟೆಲ್ ಗೋಲ್ಡ್ ಪುಂಚ್’ ಎಂಬ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕೆಲವು ದಿನಗಳಿಂದ ಶಾಸಕ ಸುನಿಲ್ನಾಯ್ಕ್ ಅವರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಲಾಗುತ್ತಿದ್ದು, ಗ್ರೂಪ್ ಅಡ್ಮಿನ್ಗಳಾದ ರಮೇಶ ನಾಯ್ಕ ಹೊನ್ನಾವರ, ಮುಕುಂದ ನಾಯ್ಕ ಶಾರದೊಳೆ, ದಿನೇಶ ನಾಯ್ಕ ಚೌಥನಿ ಇವರ ವಿರುದ್ಧ ಜನತಾ ಪ್ರಾತಿನಿದ್ಯ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರಿನಲ್ಲಿ ತಿಳಿಸಿರುವ ವ್ಯಕ್ತಿಗಳು ಬಿಜೆಪಿ ಮುಖಂಡರಾಗಿರುವುದು ವಿಶೇಷ. ದೂರಿನ ಕುರಿತು ಪ್ರತಿಕ್ರಿಯಿಸಿದ ಎಎಸ್ಪಿ ಗೌತಮ್, ದೂರಿನ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.