ಬೆಂಗಳೂರು: ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ವಿಐಟಿಇಇಇ) ಫಲಿತಾಂಶ ಶನಿವಾರ ಪ್ರಕಟಗೊಂಡಿದೆ.

ಸಂಸ್ಥೆಯು ವಿವಿಧ ಬಿ.ಟೆಕ್ ಕೋರ್ಸ್‌ಗಳಿಗೆಮೇ 28ರಿಂದ ಜೂನ್ 10ರವರೆಗೆಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆಗಳನ್ನು ನಡೆಸಿತ್ತು.ಪರೀಕ್ಷೆಯ ಫಲಿತಾಂಶವನ್ನುhttps://admissionresults.vit. ac.in/viteeeನಲ್ಲಿ ಪ್ರಕಟಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

1 ಲಕ್ಷದೊಳಗಿನ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ಇದೇ ಜೂನ್ 21ರಿಂದ ಜುಲೈ 16ರವರೆಗೆ ನಾಲ್ಕು ಹಂತಗಳಲ್ಲಿ ನಡೆಯಲಿರುವ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ. ನಂತರದರ್‍ಯಾಂಕ್ ಪಡೆದವರು ಆಂಧ್ರಪ್ರದೇಶ ಹಾಗೂ ಭೋಪಾಲ್‌ನಲ್ಲಿರುವ ಸಂಸ್ಥೆಗಳಲ್ಲಿ ಮಾತ್ರ ಪ್ರವೇಶಾತಿ ಪಡೆಯಲು ಅರ್ಹರು.

ಕೇಂದ್ರ ಮತ್ತು ರಾಜ್ಯ ಮಂಡಳಿಗಳ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದಿರುವವರಿಗೆ ಜಿ.ವಿ.ಸ್ಕೂಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಅಡಿ ನಾಲ್ಕು ವರ್ಷಗಳವರೆಗೆ ಶೇ 100ರಷ್ಟು ಶುಲ್ಕ ವಿನಾಯಿತಿ ನೀಡಲಾಗುವುದು. 50ನೇರ್‍ಯಾಂಕ್‌ವರೆಗೆ ಶೇ 75ರಷ್ಟು ಬೋಧನಾ ಶುಲ್ಕ ವಿನಾಯಿತಿ ಹಾಗೂ 100ನೇರ್‍ಯಾಂಕ್‌ವರೆಗೆ ಶೇ 50ರಷ್ಟುಬೋಧನಾ ಶುಲ್ಕ ವಿನಾಯಿತಿ ಇರಲಿದೆ.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಜಿಲ್ಲಾವಾರು ತಲಾ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ‘ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿಬೆಂಬಲ’ ಯೋಜನೆಯಡಿ ಶೇ 100ರಷ್ಟು ಶುಲ್ಕ ವಿನಾಯಿತಿ ಹಾಗೂ ಹಾಸ್ಟೆಲ್ ಶುಲ್ಕ ವಿನಾಯಿತಿಯೂ ಇರಲಿದೆ.ತರಗತಿಗಳು ಆಗಸ್ಟ್ 2ರಿಂದ ಪ್ರಾರಂಭಗೊಳ್ಳಲಿದೆ.

‘ಸಂಸ್ಥೆಯ ಬಿ.ಎಸ್‌ಸಿ (ಕೃಷಿ) ಸೇರಿದಂತೆ ವಿವಿಧ ಪದವಿಗಳು ಹಾಗೂ ವಿವಿಧಸಂಯೋಜಿತ ಕಾರ್ಯಕ್ರಮಗಳಿಗೆ ಪ್ರವೇಶ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್www.vit.ac.in ನೋಡಬಹುದು’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.