ಬೆಂಗಳೂರು: ‘ಒಕ್ಕಲಿಗರು ಕೃಷಿ ಮತ್ತು ಶಿಕ್ಷಣ ಕ್ಷೇತ್ರದಾಚೆಗೂ ಬೆಳೆಯಬೇಕು. ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಂಡು ಉದ್ಯಮಿಗಳಾಗಬೇಕು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಶನಿವಾರ ಫರ್ಸ್ಟ್ ಸರ್ಕಲ್ ಒಕ್ಕಲಿಗ ಎಕ್ಸ್ಪೋದ ‘ಉದ್ಯಮಿ ಪ್ರತಿನಿಧಿಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಉದ್ಯಮ ಕ್ಷೇತ್ರವು ಬಹಳ ತ್ವರಿತವಾಗಿ ಬೆಳೆಯುತ್ತಿದೆ. ಈ ಅವಕಾಶವನ್ನು ಒಕ್ಕಲಿಗರು ಬೆಳೆಸಿಕೊಳ್ಳಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ಕ್ಷೇತ್ರದ ಉತ್ತೇಜನಕ್ಕೆ ಕೇಂದ್ರ ಸರ್ಕಾರವು ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಅವನ್ನು ಒಕ್ಕಲಿಗರು ಬಳಸಿಕೊಳ್ಳಬೇಕು’ ಎಂದರು.

‘ಎಂಎಸ್ಎಂಇ ಸ್ಥಾಪನೆಗೆ ಮುಂದಾಗುವವರಿಗೆ ಸಾಲ, ಸಹಾಯಧನ, ತರಬೇತಿ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಆರಂಭಿಸಿದೆ. ಇವುಗಳನ್ನು ಬಳಸಿಕೊಂಡು ಎಲ್ಲ ಸಮುದಾಯದವರೂ ಉದ್ಯಮಿಗಳಾಗುತ್ತಿದ್ದಾರೆ. ಒಕ್ಕಲಿಗರು ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ. ಅದರ ಜತೆಯಲ್ಲಿ ಉದ್ಯಮಿಗಳಾಗುವತ್ತಲೂ ಗಮನ ಹರಿಸಬೇಕು’ ಎಂದು ತಿಳಿಸಿದರು.

‘ಭಾರತದಲ್ಲೇ ತಯಾರಿಸಿ ಅಭಿಯಾನವು, ದೇಶದಲ್ಲಿ ಉದ್ಯಮಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತಿದೆ. ಅದರ ಫಲವಾಗಿ ದೇಶದಲ್ಲಿ ತಯಾರಿಕಾ ಚಟುವಟಿಕೆಯು ಉತ್ತಮ ಬೆಳವಣಿಗೆ ಸಾಧಿಸಿದೆ ಹಾಗೂ ರಫ್ತು ಹೆಚ್ಚುತ್ತಿದೆ. ಇಂತಹ ಅವಕಾಶವನ್ನು ಒಕ್ಕಲಿಗರು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

‘ಇದಕ್ಕಾಗಿ ಒಕ್ಕಲಿಗರು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೌಶಲ ಅಭಿವೃದ್ಧಿ, ಮಾರುಕಟ್ಟೆ, ರಫ್ತು ಮಾರುಕಟ್ಟೆ ಸಂಬಂಧ ತರಬೇತಿ ಪಡೆದುಕೊಳ್ಳುವುದು ಅತ್ಯಗತ್ಯ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅವಕಾಶಗಳಿದ್ದು, ಅದನ್ನೇ ಉದ್ಯಮವಾಗಿ ಪರಿವರ್ತಿಸಬಹುದು. ಈ ಉದ್ಯಮ ಕಲೆಗಳನ್ನು ಒಕ್ಕಲಿಗರು ಕರಗತ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.