ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ, ಕರ್ನಾಟಕದ ಒಂದು ಕ್ಷೇತ್ರದಲ್ಲಿ ‘ಮತಗಳ್ಳತನ’ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪುರಾವೆಗಳು ಇದ್ದರೆ ತಕ್ಷಣವೇ ಬಿಡುಗಡೆ ಮಾಡಲಿ ಎಂದು ರಾಜ್ಯ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಸಂಸದ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾ ಹೇಳಿಕೆ ನೀಡಿದ್ದರೆ, ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

‘ರಾಜಕೀಯ ಉದ್ದೇಶಕ್ಕಾಗಿ, ಮತಗಳ್ಳತನದ ಹೆಸರಿನಲ್ಲಿ ಸಾಂವಿಧಾನಿಕ ಸಂಸ್ಥೆಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ದಾಖಲೆ ಇದ್ದರೆ, ರಾಹುಲ್ ಗಾಂಧಿ ತಕ್ಷಣ ಬಿಡುಗಡೆ ಮಾಡಲಿ. ಆಟಂ ಬಾಂಬ್ ಇದೆ ಎಂದಿದ್ದಾರೆ. ತಕ್ಷಣವೇ ಅದನ್ನು ಹೊರಗಿಡಿ, ಇಲ್ಲದಿದ್ದಲ್ಲಿ ಅದು ಅಲ್ಲೇ ಸ್ಫೋಟಿಸಬಹುದು’ ಎಂದು ಬೊಮ್ಮಾಯಿ ವ್ಯಂಗ್ಯ ಮಾಡಿದ್ದಾರೆ.

‘ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ಬರುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಆಗಿರುವ ಲೋಪ ಏನು ಎಂದು ಚುನಾವಣಾ ಆಯೋಗ ಕೇಳಿದರೂ, ಕಾಂಗ್ರೆಸ್ ದೂರು ನೀಡಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳೇ ರಾಜ್ಯದಲ್ಲಿ ಚುನಾವಣೆ ಮುಖ್ಯಸ್ಥರು. ಚುನಾವಣೆ ವಿಚಾರದಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಇದ್ದರೆ ಸಾಕ್ಷಿಯನ್ನು ಒದಗಿಸಿ’ ಎಂದು ಒತ್ತಾಯಿಸಿದ್ದಾರೆ.

‘ಇವಿಎಂ ಮೇಲೆ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇವಿಎಂ ಅನ್ನು ಹ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಎಂದು ಚುನಾವಣಾ ಆಯೋಗ ಸವಾಲು ಹಾಕಿತ್ತು. ಆದರೆ ಪ್ರಾತ್ಯಕ್ಷಿಕೆ ನೀಡಲು ಕಾಂಗ್ರೆಸ್ ಬರಲೇ ಇಲ್ಲ’ ಎಂದಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ತಮ್ಮ ಪತ್ರದಲ್ಲಿ, ‘ರಾಹುಲ್ ಜೀ ಅವರೆ, ನೀವು ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಡ್ಡಿಯಿಲ್ಲ. ಆದರೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ನಾವು ನಡೆಸುವ ಪ್ರತಿಭಟನೆಗೆ ಜತೆಯಾಗಿ’ ಎಂದು ಆಹ್ವಾನಿಸಿದ್ದಾರೆ.

‘ಬಿ.ಆರ್ ಅಂಬೇಡ್ಕರ್ ಅವರನ್ನು ಹಲವು ಚುನಾವಣೆಗಳಲ್ಲಿ ಸೋಲಿಸಲು ಕಾಂಗ್ರೆಸ್ ಪಕ್ಷ ಮತಗಳ್ಳತನ ಮಾಡಲಿಲ್ಲವೇ? ಅವರಿಗೆ ಕಾಂಗ್ರೆಸ್ ಪಕ್ಷವು ಪದೇಪದೇ ಮಾಡಿದ ಅವಮಾನಗಳ ಹಿಂದಿರುವ ನಿಜವಾದ ನಿಲುವೇನು? 1975ರಲ್ಲಿ ನಿಮ್ಮ ಅಜ್ಜಿ ಇಂದಿರಾ ಗಾಂಧಿಯವರು ನ್ಯಾಯಾಲಯದ ತೀರ್ಪಿನ ಪ್ರಕಾರ ಅನರ್ಹರಾಗಲು ಕಾರಣಗಳೇನು? ಅನರ್ಹರಾಗದಂತೆ ನಡೆಸಿದ ಕಾನೂನು ಬದಲಾವಣೆಗಳು ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ ಹಿಂದಿನ ಕಾರಣಗಳೇನು’ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಮತಗಟ್ಟೆಯಲ್ಲೂ ಎಲ್ಲ ಪಕ್ಷಗಳು ಏಜೆಂಟ್ ನೇಮಿಸಬಹುದು. ಮತದಾರರ ಹೆಸರು ಡಿಲೀಟ್ ಅಥವಾ ಸೇರ್ಪಡೆ ಆಗಿದ್ದರೆ ಆಗಲೇ ತಕರಾರು ದಾಖಲಿಸಬೇಕಿತ್ತು
–ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ

ಪ್ರಧಾನಿ ನರೇಂದ್ರ ಮೋದಿ ಅವರು ಮತಗಳ್ಳತನ ಮಾಡಿದ್ದರೆ ನೀವು ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಕುಳಿತುಕೊಳ್ಳುವ ಅವಕಾಶ ಸಿಗುತ್ತಿತ್ತೇ?
–ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ
.ನಾನು ರಾಜನಾಗಲು ಬಯಸಲ್ಲ, ಆ ಪರಿಕಲ್ಪನೆಯೇ ಇಷ್ಟವಿಲ್ಲ: ರಾಹುಲ್ ಗಾಂಧಿ.2024ರ ಲೋಕಸಭಾ ಚುನಾವಣೆಯಲ್ಲಿ 70-100 ಸ್ಥಾನಗಳಲ್ಲಿ ಮತ ಕಳವು: ರಾಹುಲ್ ಗಾಂಧಿ.ಮತ ಕಳ್ಳತನ: ಆಗಸ್ಟ್ 5ಕ್ಕೆ ರಾಹುಲ್ ಗಾಂಧಿ 5 ರಾಜ್ಯಕ್ಕೆ.ಚುನಾವಣಾ ಆಯೋಗ ‘ಪಕ್ಷಪಾತಿ’: ರಾಹುಲ್ ಗಾಂಧಿ ವಾಗ್ದಾಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.