ಚಿಕ್ಕಬಳ್ಳಾಪುರ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಮತಗಟ್ಟೆ ಅಧಿಕಾರಿಗೆ (ಬಿಎಲ್ಒ) ಚಿಕ್ಕಬಳ್ಳಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ್ದಾರೆ. ಈ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿಡಾಡುತ್ತಿದೆ. ನಾಗೇಶ್ ರೆಡ್ಡಿ ವರ್ತನೆ ರಾಜಕೀಯ ವಲಯದಲ್ಲಷ್ಟೇ ಅಲ್ಲ ನಾಗರಿಕ ವಲಯದಲ್ಲಿಯೂ ತೀವ್ರ ಟೀಕೆಗೆ ಗುರಿಯಾಗಿದೆ.

ತಾಲ್ಲೂಕಿನ ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಯರ್ರಮಾರೇನಹಳ್ಳಿ ಬಿಎಲ್ಒ ಶಿವಶಂಕರ್ ಅವರಿಗೆ ನಾಗೇಶ್ ರೆಡ್ಡಿ ಏಕ ವಚನದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ.

‘ಯಾವ ರೂಲ್ಸ್ ಮಾತನಾಡುತ್ತೀರಿ ನೀವು. ಬಿಜೆಪಿಗೆ ಸಪೋರ್ಟ್ ಮಾಡುತ್ತೀಯಾ. ನೀನು ಯಾವನಯ್ಯ ಕೇಳೋಕೆ. ...ನನ್ಮಗನೆ....ಬಿಜೆಪಿಗೆ ಬಜೆಟ್ ಹಿಡಿಯುತ್ತೀಯಾ. ನನ್ನ ಮೇಲೆ ಎರಡು ಕೇಸ್ ಇವೆ. ನೀನು ಏನು ನನ್ನ ಮೇಲೆ ಕಂಪ್ಲೆಂಟ್ ಕೊಡುತ್ತೀಯಾ. ನಿನ್ನದೊಂದು ಕೇಸ್ ಆಗಲಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಶಿವಶಂಕರ್ ಜೊತೆ ಅವಾಚ್ಯವಾಗಿ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.