ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಲ ಸಮ್ಮೇಳನದ ನಿರ್ಣಯ ನ್ಯೂಯಾರ್ಕ್‌ನಲ್ಲಿ ಪ್ರದರ್ಶನ

ಜಲತಜ್ಞ ಡಾ. ರಾಜೇಂದ್ರ ಸಿಂಗ್ ಘೋಷಣೆ
Published : 25 ಜನವರಿ 2023, 20:10 IST
ಫಾಲೋ ಮಾಡಿ
Comments

ಧಾರವಾಡ: ‘ಅಂತರರಾಷ್ಟ್ರೀಯ ಜಲ ನಿರ್ವಹಣೆ ಮತ್ತು ಹವಾಮಾನ ಬದಲಾವಣೆ ಕುರಿತ ಸಮ್ಮೇಳನದ ನಿರ್ಣಯಗಳನ್ನು ಮಾರ್ಚ್‌ 2 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಜಲ ಸಮ್ಮೇಳನದಲ್ಲಿ ಪ್ರದರ್ಶಿಸಲು ನೂರಕ್ಕೂ ಹೆಚ್ಚು ಜನರು ಭಾರತದಿಂದ ತೆರಳಲು ನಿರ್ಧರಿಸಲಾಗಿದೆ’ ಎಂದು ಜಲತಜ್ಞ ಡಾ. ರಾಜೇಂದ್ರ ಸಿಂಗ್ ಹೇಳಿದರು.

ನೀರು ಮತ್ತು ನೆಲ ನಿರ್ವಹಣಾ ಸಂಸ್ಥೆ(ವಾಲ್ಮಿ) ಯಲ್ಲಿ ಬುಧವಾರ ಜರುಗಿದ ಅಂತರರಾಷ್ಟ್ರೀಯ ‘ಜಲ ನಿರ್ವಹಣೆ ಮತ್ತು ಹವಾಮಾನ ಬದಲಾವಣೆ’ ಕುರಿತ ಸಮ್ಮೇಳನದಲ್ಲಿನ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಸಮುದಾಯ ಆಧಾರಿತ ನೀರು ನಿರ್ವಹಣೆ ಯೋಜನೆಯು ಜಗತ್ತಿನ ಇಂದಿನ ಹಾಗೂ ಭವಿಷ್ಯದ ಅಗತ್ಯವಾಗಿದೆ. ಮೂರನೇ ಮಹಾಯುದ್ಧ ತಪ್ಪಿಸಬೇಕಾದರೆ ನೀರನ್ನು ಮಾರಾಟದ ಸರಕಾಗಿಸುವ ಬದಲು, ಪ್ರತಿ ಜೀವಿಯ ಹಕ್ಕು ಎಂಬುದನ್ನು ನಾವು ಪರಿಗಣಿಸಬೇಕು. ಮಳೆ ನೀರು ಸಂರಕ್ಷಣೆ ಹಾಗೂ ಮಿತ ಬಳಕೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲದು. ಇವುಗಳನ್ನು ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಲಾಗುವುದು’ ಎಂದರು.

‘ವಾಲ್ಮಿ ಆಯೋಜಿಸಿರುವ ಈ ಸಮ್ಮೇಳನದಲ್ಲಿ ಒಟ್ಟು 22 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಅವರ ಮೂಲಕವೂ ಇಲ್ಲಿ ಕೈಗೊಂಡ ನಿರ್ಣಯಗಳನ್ನು ಜಗತ್ತಿನ ಇತರ ಭಾಗಗಳಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT