ಬೆಂಗಳೂರು: 'ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿದವರಿಗೆ ಮರಳಿ ಆಹ್ವಾನ ನೀಡಲಾಗುವುದು. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಗೆ ಬಂದರೆ, ಸಂತೋಷದಿಂದ ಅವರನ್ನು ಬರಮಾಡಿಕೊಳ್ಳಲಾಗುವುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಭಾನುವಾರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವ ನಾರಾಯಣ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

'ಕಾಂಗ್ರೆಸ್ ಪಾಲಿಗೆ ಈ ವರ್ಷ ಸಂಘಟನೆಯ, ಹೋರಾಟದ ವರ್ಷವಾಗಿದೆ. ಕಾಂಗ್ರೆಸ್ ಶಾಸಕರಿಲ್ಲದ 100 ವಿಧಾನ ಸಭಾ ಕ್ಷೇತ್ರಗಳಿಗೆ ಪ್ರವಾಸ ಹಮ್ಮಿಕೊಂಡು ಪಕ್ಷ ಸಂಘಟಿಸಲಾಗುವುದು' ಎಂದರು.

'ಕಾಂಗ್ರೆಸ್ ಕಚೇರಿ, ಪಕ್ಷದ ದೇವಸ್ಥಾನ ಇದ್ದಂತೆ. ಎಲ್ಲ ಸ್ಥಳೀಯ ನಾಯಕರು ಕಾಂಗ್ರೆಸ್ ಕಚೇರಿ ಒಳಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿಯೇ ಸಭೆ ನಡೆಸಬೇಕು. ನಾಯಕರ ಮನೆಗಳಲ್ಲಿ ಸಭೆ ನಡೆಸಬಾರದು' ಎಂದರು.
'ವ್ಯಕ್ತಿ ಪೂಜೆ ಮಾಡುವುದು, ಜೈಕಾರ ಹಾಕುವುದು ಬೇಡ. ಪಕ್ಷ ಪೂಜೆ ಇರಲಿ. ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ, ಆ ವ್ಯಕ್ತಿ ಎಷ್ಟು ಜನರನ್ನು ಬೆಳೆಸುತ್ತಾನೆ ಎಂಬುದು ಮುಖ್ಯ' ಎಂದರು.

'ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ನಾನು ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.