ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶ
ರಾಜ್ಯಕ್ಕೆ ವಾಡಿಕೆಗಿಂತ ಮೊದಲೇ, ಶನಿವಾರ (ಮೇ 24) ಮುಂಗಾರು ಪ್ರವೇಶ ಆಗಿದೆ. ಸಾಮಾನ್ಯವಾಗಿ ಜೂನ್ ಒಂದರಂದು ಮುಂಗಾರು ಆರಂಭವಾಗುತ್ತದೆ. ಈ ಬಾರಿ ಎಂಟು ದಿನ ಮೊದಲೇ ಕೇರಳದ ಮೂಲಕ ಪ್ರವೇಶಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅಪರೂಪದ ಪ್ರಕ್ರಿಯೆಯಾಗಿದೆ. 2009ರಲ್ಲಿ ಜುಲೈ 23ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಕಳೆದ ವರ್ಷ ಮೇ 30ರಂದು ಮತ್ತು 2023ರಲ್ಲಿ ಜೂ.8ರಂದು ಮುಂಗಾರು ಮಳೆ ಅರಂಭವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.